ಮುಂಬಯಿ(ಜ.24. ಕುಲಾಲ್ ವರ್ಲ್ಡ್ ನ್ಯೂಸ್): ಮುಂಬಯಿಯ ಪ್ರತಿಷ್ಠಿತ ಕುಲಾಲ ಸಂಘದ ಸಂಚಾಲಕತ್ವದಲ್ಲಿರುವ ‘ಜ್ಯೋತಿ ಬ್ಯಾಂಕ್’ ಎಂದು ಕರೆಸಿಕೊಳ್ಳುವ ಜ್ಯೋತಿ ಕೋ-ಆಪರೇಟಿವ್ ಕ್ರೆಡಿಟ್ ಸೊಸೈಟಿಯ ನೂತನ 4 ನೇ ಶಾಖೆ ಇದೇ ಬರುವ ಫೆಬ್ರವರಿ 4 ರಂದು ನಲಸೋಪರ (ಪ)ದಲ್ಲಿ ಉದ್ಘಾಟನೆಗೊಳ್ಳಲಿದೆ.
ಕೇಂದ್ರ ಕಛೇರಿ ಮುಂಬಯಿಯ ಫೋರ್ಟ್ನಲ್ಲಿದ್ದು ಇದರ ಇತರ ಶಾಖೆಗಳು ಮುಂಬಯಿಯ ಬೋರಿವಲಿ (ಪೂ), ನವಿಮುಂಬಯಿಯ ನೇರುಲ್, ಠಾಣೆ ಜಿಲ್ಲೆಯ ಕಲ್ಯಾಣ್(ಪ)ದಲ್ಲಿ ಕಾರ್ಯಾಚರಿಸುತ್ತಿದೆ.
ಫೆ.4ರಂದು ಬೆಳಿಗ್ಗೆ ಗಣಹೋಮ, ಸತ್ಯ ನಾರಾಯಣ ಪೂಜೆಯೊಂದಿಗೆ ಉದ್ಘಾಟನೆಗೊಳ್ಳಲಿದೆ ಬ್ಯಾಂಕ್ ನ ಅದ್ಯಕ್ಷ ಗಿರೀಶ್ ಬಿ. ಸಾಲ್ಯಾನ್, ಉಪಾಧ್ಯಕ್ಷ ಪಿ. ಶೇಖರ್ ಮೂಲ್ಯ, ಕಾರ್ಯದರ್ಶಿ ದೇವದಾಸ್ ಎಲ್.ಕುಲಾಲ್, ಕೋಶಾಧಿಕಾರಿ ಭಾರತಿ ಪಿ. ಅರ್ಕ್ಯಾನ್ ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಫೆ.4ರಂದು ಜ್ಯೋತಿ ಕೋ-ಆಪರೇಟಿವ್ ಕ್ರೆಡಿಟ್ ಸೊಸೈಟಿಯ ನೂತನ ಶಾಖೆ ಉದ್ಘಾಟನೆ
Kulal news
1 Min Read