ಕಟೀಲು(ಜ.೨೨, ಕುಲಾಲ್ ವರ್ಲ್ಡ್ ನ್ಯೂಸ್): ತುಳುನಾಡ ಪೊರ್ಲು ಸೇವಾ ಟ್ರಸ್ಟ್(ರಿ) ನ 17ನೇ ತಿಂಗಳ ಮೂರು ಮಾಸಿಕ ಸೇವಾ ಯೋಜನೆಯ ಸೇವಾ ಹಸ್ತಾಂತರ ಕಟೀಲು ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರದಲ್ಲಿ ನಡೆಯಿತು. ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಬಂಟ್ವಾಳ ತಾಲೂಕು, ನೇರಳಕಟ್ಟೆ, ನೆಟ್ಲಮುಡ್ನೂರು ಗಣೇಶ್ ನಗರ ನಿವಾಸಿ ನಾರಾಯಣ ಕುಲಾಲ್ ಮತ್ತು ಸಾವಿತ್ರಿ ದಂಪತಿಯ 13 ವರುಷದ ಎರಡನೇ ಮಗ ಗಗನ್ ನ ಚಿಕಿತ್ಸೆಗೆ, ರೂ.25,000 ಚೆಕ್ ನೀಡಲಾಯಿತು.
ಇವರಲ್ಲದೇ ಮುಖದ ಅಂಗವಿಕಲತೆಯಿಂದ ಬಳಲುತ್ತಿರುವ ಮಂಗಳೂರು ತಾಲೂಕು, ಸಸಿಹಿತ್ಲು ಸಮೀಪದ ಮೂಡುಕೊಪ್ಲ, ಸೌಮ್ಯ ನಿಲಯದ ದಿ.ದಿವಾಕರ ಕರ್ಕೇರ ಮತ್ತು ವಾರಿಜ ದಂಪತಿಗಳ 22 ವರುಷದ ಎರಡನೇ ಮಗಳು ರಕ್ಷಿತಾರವರ ಚಿಕಿತ್ಸೆಗೆ ರೂ.25,000 ಚೆಕ್ ಮತ್ತು ಕ್ಯಾನ್ಸರ್ ಪೀಡಿತ ಮಂಗಳೂರು ತಾಲೂಕು, ಮಲ್ಲೂರು, ದೆಮ್ಮಲೆ ತಾಲೊoಟು ಮನೆ ನಿವಾಸಿ ಉಮೇಶ್ ಪೂಜಾರಿಯವರ ಪತ್ನಿ ಜಯಂತಿರವರ ಚಿಕಿತ್ಸೆಗೆ ರೂ.25,000 ಚೆಕ್ ಅನ್ನು ಶ್ರೀಕಟೀಲು ದುರ್ಗಾಪರಮೇಶ್ವರಿ ಕ್ಷೇತ್ರ ದಲ್ಲಿ ಕ್ಷೇತ್ರದ ಆರ್ಚಕರಾದ ಶ್ರೀ ಕಮಲಾದೇವಿ ಪ್ರಸಾದ ಆಸ್ರಣ್ಣ ಮತ್ತು ಶ್ರೀಹರಿ ನಾರಾಯಣ ದಾಸ ಆಸ್ರಣ್ಣ ಇವರುಗಳ ದಿವ್ಯ ಹಸ್ತದಲ್ಲಿ ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಟ್ರಸ್ಟ್ ನಪದಾಧಿಕಾರಿಗಳ ತಂಡದವರು ಉಪಸ್ಥಿತರಿದ್ದರು.