ಬಂಟ್ವಾಳ(ಜ.೨೨, ಕುಲಾಲ್ ವರ್ಲ್ಡ್ ನ್ಯೂಸ್): ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಜೀರ್ಣೋದ್ಧಾರ ಸಂದರ್ಭ ಗರ್ಭಗುಡಿಯ ದ್ವಾರ ಹಾಗೂ ಬಾಗಿಲಿಗೆ ಬೆಳ್ಳಿ ಮುಚ್ಚುವ ಸಲುವಾಗಿ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಕರಾವಳಿ ಕುಲಾಲ ಕುಂಬಾರರ ಯುವ ವೇದಿಕೆಯು ಸ್ವಜಾತಿ ಧಾನಿಗಳಿಂದ ಸಂಗ್ರಹಿಸಿದ 1,20,817/- ರೂಪಾಯಿಯನ್ನು ಕಮಿಟಿಯ ಗೌರವ ಅಧ್ಯಕ್ಷ, ಅಧ್ಯಕ್ಷ ಹಾಗೂ ಪದಾಧಿಕಾರಿಗಳ ಸಮ್ಮುಖದಲ್ಲಿ ಹಸ್ತಾ೦ತರಿಸಲಾಯಿತು.
ಬಂಟ್ವಾಳ ಯುವ ವೇದಿಕೆಯ ಅಧ್ಯಕ್ಷರು ನಾರಾಯಣ್ ಸಿ.ಪೆರ್ಣೆ, ಗೌರವ ಸಲಹೆಗಾರು ಟಿ.ಶೇಷಪ್ಪ ಮಾಸ್ಟರ್, ಕೋಶಾಧಿಕಾರಿ ಮಾಧವ ಕುಲಾಲ್, ಉಪಾಧ್ಯಕ್ಷರು ಸುಕುಮಾರ್ ಬಂಟ್ವಾಳ, ಜಯರಾಜ್.ಯಸ್ ಬಂಗೇರ, ರಾಜ್ಯಮಹಿಳಾಸಂಘದ ಭಾರತಿ ಟಿ.ಶೇಷಪ್ಪ, ವಿದ್ಯಾ, ಉಮೇಶ್ ಮೂಲ್ಯ ಈ ಸಂದರ್ಭ ಉಪಸ್ಥಿತರಿದ್ದರು.