ಬೆಂಗಳೂರು(ಜ.೧೧, ಕುಲಾಲ್ ವರ್ಲ್ಡ್ ನ್ಯೂಸ್): ಕುಂಬಾರ ಸಮುದಾಯದ ಹಿರಿಯ ಶಸ್ತ್ರಚಿಕಿತ್ಸಾ ತಜ್ಞರಾದ ತುಮಕೂರಿನ ಸರಕಾರಿ ಆಸ್ಪತ್ರೆಯ ವೈದ್ಯ ಡಾ.ಅಂಪಣ್ಣ ಅವರ ಸಮಾಜಮುಖಿ ವೈದ್ಯಕೀಯ ಸೇವೆಯನ್ನ ಪರಿಗಣಿಸಿ ಅವರ ಹುಟ್ಟೂರ ಬಡಾವಣೆಗೆ ಅವರ ಹೆಸರನ್ನಿಟ್ಟು ಸರಕಾರ ಗೌರವಿಸುತ್ತಿದೆ.
ಪತ್ನಿ ಸೌಭಾಗ್ಯ ಅವರ ಜೊತೆ ಡಾ. ಅಂಪಣ್ಣ
ಮಧುಗಿರಿಯ ಡಾ. ಅಂಪಣ್ಣ ಸೌಭಾಗ್ಯದಂತ ಆಸ್ಪತ್ರೆಯ ಸಂಯುಕ್ತ ಆಶ್ರಯದಲ್ಲಿ ಬಡಾವಣೆಯ ಉದ್ಘಾಟನಾ ಸಮಾರಂಭವು ಜ. ೧೩ರಂದು ನಡೆಯಲಿದೆ. ಮೇಲುಕೋಟೆ ಗ್ರಾಪಂ ವ್ಯಾಪ್ತಿಯ ಗೊಲ್ಲಹಳ್ಳಿ ಸರ್ಕಾರಿ ಪ್ರೌಢ ಶಾಲಾ ಆವರಣದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಗಣ್ಯರ ಉಪಸ್ಥಿತಿಯಲ್ಲಿ ರಾಜ್ಯ ಕಾನೂನು ಸಚಿವ ಟಿ.ಬಿ ಜಯಚಂದ್ರ ಬಡಾವಣೆಯ ಉದ್ಘಾಟನೆ ನೆರವೇರಿಸಲಿದ್ದಾರೆ. ಡಾ.ಅಂಪಣ್ಣ ಅವರು ರಾಜ್ಯ ಕುಂಬಾರ ಸಂಘ ಹಾಗು ಕುಂಭ ವೈದ್ಯ ಕೂಟದ ಸ್ಥಾಪಕ ಸದಸ್ಯರಾಗಿದ್ದಾರೆ.