ಮಂಜೇಶ್ವರ(ಜ.೦೬, ಕುಲಾಲ್ ವರ್ಲ್ಡ್ ನ್ಯೂಸ್): ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿರುವ ಕುಂಜತ್ತೂರು ತೂಮಿನಾಡಿನ ಗೀತಾ ಅವರ ಚಿಕಿತ್ಸೆಗೆ `ಕುಲಾಲ ಹಸ್ತ’ ಎಂಬ ವಾಟ್ಸಪ್ ಗ್ರೂಪಿನ ಸದಸ್ಯರು ಸಂಗ್ರಹಿಸಿದ 15,000/- ರೂ. ನೆರವು ನೀಡಿದರು.
ಜ.5ರಂದು ಗೀತಾ ಅವರ ಮನೆಗೆ ಭೇಟಿ ನೀಡಿದ `ಕುಲಾಲ ಹಸ್ತ’ ಸ್ಥಾಪಕ ರಾಜೇಶ್ ಮುಗುಳಿ ಮತ್ತು ಸದಸ್ಯರುಗಳಾದ ರವೀಂದ್ರ ಕುಲಾಲ್ ವರ್ಕಾಡಿ, ಬಾಲಕೃಷ್ಣ ಬಂಗೇರ ದೀಕ್ಷಾ ವುಡ್ ಇಂಡಸ್ಟ್ರೀಸ್, ಇಂಜಿನಿಯರ್ ಗಣೇಶ್ ಕುಲಾಲ್, ದಿನೇಶ್ ಕುಲಾಲ್ ನಿಶು ಡಿಜಿಟಲ್, ನಿರಂಜನ್ ಕುಲಾಲ್ ಮುರತ್ತನೆ, ಭರತ್ ಕುಲಾಲ್ ಮುರತ್ತನೆ ಅವರು ಧನ ಸಹಾಯ ಹಸ್ತಾ೦ತರ ಮಾಡಿದರು. ಗೀತಾ ಅವರ ಸ್ಥಿತಿಯ ಕುರಿತು `ಕುಲಾಲ್ ವರ್ಲ್ಡ್ ಡಾಟ್ ಕಾಮ್ ‘ ವಿಸ್ತೃತ ವರದಿ ಪ್ರಕಟಿಸಿತ್ತು.