ಕಾಪು(ಡಿ.೦೧, ಕುಲಾಲ್ ವರ್ಲ್ಡ್ ನ್ಯೂಸ್): ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವ ಕಾಪು ಸಮೀಪದ ಮಣಿಪುರ ಕಲ್ಮಂಜೆ ನಿವಾಸಿ ಶಾಂತ ಮೂಲ್ಯರ ವೈದ್ಯಕೀಯ ವೆಚ್ಚಕ್ಕೆ ಸಹಕರಿಸುವ ನಿಟ್ಟಿನಲ್ಲಿ ಕಾಪು ಕುಲಾಲ ಯುವ ವೇದಿಕೆ ವತಿಯಿಂದ ಸಂಗ್ರಹಿಸಿದ 29,300ರೂ. ಡಿಸೇಂಬರ್ 31ರಂದು ಭಾನುವಾರದಂದು ಸಂತ್ರಸ್ತರಿಗೆ ಅವರ ಸ್ವಗೃಹದಲ್ಲಿ ಹಸ್ತಾಂತರಿಸಲಾಯಿತು.
ಸಂಕಷ್ಟ ಎಂದಾಗ ಸಹಾಯಕ್ಕಾಗಿ ಧಾವಿಸುವ ಮಾನವೀಯತೆಯ ಮನಸ್ಸುಗಳ ಕಂಡಾಗ ಪರೋಪಕ್ಕಾರಕ್ಕಾಗಿಯೇ ಬದುಕನ್ನು ಮುಡಿಪಾಗಿಟ್ಟ ಶಾಂತ ಮೂಲ್ಯರ ಜೀವನದ ಆದರ್ಶ ತತ್ವಗಳೇ ಅವರ ಕಷ್ಟ ಕಾಲಕ್ಕೆ ಸಾಂತ್ವನದ ನುಡಿಗಳಾಗಿ ಆತ್ಮಸ್ಥೈರ್ಯ ತುಂಬಿದವು ಅಂದರೆ ತಪ್ಪಾಗಲಾರದು. ತನ್ನವರಿಗಾಗಿ ಬದುಕನ್ನು ಶ್ರೀ ಗಂಧದಂತೆ ತೇಯ್ದು ತನ್ನವರ ಬಾಳಿಗೊಂದು ಭದ್ರತೆಯ ಸಂತಸದ ಪರಿಮಳ ಬೀರಿದ ಶಾಂತ ಮೂಲ್ಯರ ಹೋರಾಟದ ಬದುಕಯಾನವು ಅತಂತ್ರತೆಲ್ಲಿ ಸಿಲುಕಿದ್ದು ದುರದೃಷ್ಟಕರ.
ಶಾಂತ ಮೂಲ್ಯರ ದಯನೀಯ ಸ್ಥಿತಿಯ ಬಗ್ಗೆ ಕುಲಾಲ ಯುವ ವೇದಿಕೆ ವಾಟ್ಸಪ್ ಗ್ರೂಪ್ ನ ವರದಿಗೆ ದಾನಿಗಳು ಧನ ಸಹಾಯದ ಮೂಲಕ ಉತ್ತಮ ಪ್ರತಿಸ್ಪಂದನೆ ನೀಡಿದ್ದರು. ಸಂಗ್ರಹಿಸಲ್ಪಟ್ಟ ಸಹಾಯ ಧನವನ್ನು ಹಸ್ತಾಂತರಿಸುವಾಗ ಕುಲಾಲ ಯುವ ವೇದಿಕೆ ಕಾಪು ವಲಯದ ಅಧ್ಯಕ್ಷರಾದ ಉದಯ್ ಕುಲಾಲ್ ಕಳತ್ತೂರು, ಅರುಣ್ ಕುಲಾಲ್ ಮೂಳೂರು, ಕುಲಾಲ್ ವರ್ಲ್ಡ್ ವಾಟ್ಸಪ್ ಗ್ರೂಪ್ ನ ಅಡ್ಮಿನ್ ಹೇಮಂತ್ ಕುಲಾಲ್ ಕಿನ್ನಿಗೋಳಿ, ದಿನೇಶ್ ಮೂಲ್ಯ ಮರ್ಣೆ, ಕಾರ್ತಿಕ್ ಮೂಲ್ಯ ಮಣಿಪುರ ಉಪಸ್ಥಿತರಿದ್ದರು.
ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಶಾಂತ ಮೂಲ್ಯರಿಗೆ ಧನ ಸಹಾಯ ಮಾಡುವ ದಾನಿಗಳಿಗಾಗಿ ಅವರ ಬ್ಯಾಂಕ್ ಖಾತೆ ಸಂಖ್ಯೆಯನ್ನು ಇಲ್ಲಿ ನೀಡಲಾಗಿದೆ.
Ac no:01692210005756
IFSC:SYNB0000169
Branch:Manipura Dendoorkatte
Ph no:8722019011