2018- ಹೊಸ ವರ್ಷಕ್ಕೆ ಸ್ವಾಗತ… ಹೊಸತನ ಅನ್ನುವುದು ಸೃಷ್ಟಿಯ ನಿಯಮ. ಹೀಗಾಗಿಯೇ ಸದಾ ಒಂದಲ್ಲ ಒಂದು ಹೊಸತನಕ್ಕಾಗಿ ನಮ್ಮ ಮನಸ್ಸು ತುಡಿಯುತ್ತಿರುತ್ತದೆ. ಹೊಸ ಜೀವನ, ಹೊಸ ಕಾರು, ಹೊಸ ಮನೆ, ಹೊಸ ಹುದ್ದೆ, ಹೊಸ ಗೆಳೆಯರು, ಹೊಸ ಸ್ಥಳಗಳು, ಹೊಸ ಮೊಬೈಲ್… ಹೀಗೆ ಹೊಸ ಬಟ್ಟೆಯಿಂದ ಹಿಡಿದು ಹೊಸ ಚಪ್ಪಲಿಯವರೆಗಿನ ಪ್ರತಿಯೊಂದು ಹೊಸತನಗಳನ್ನು ನಾವು ತುಂಬಾ ಹರ್ಷದಿಂದ ಸ್ವಾಗತಿಸುತ್ತೇವೆ.
ಅದೇ ರೀತಿ ಈಗ ಹಳೆಯ ನೋವು, ನೆನಪುಗಳನ್ನೆಲ್ಲಾ ಬದಿಗೆ ಸರಿಸಿ ಹೊಸ ನಿರೀಕ್ಷೆ ಹಾಗೂ ಕನಸುಗಳೊಂದಿಗೆ ಮತ್ತೊಂದು ಹೊಸ ವರ್ಷವನ್ನು ನಾವು ಬರಮಾಡಿಕೊಳ್ಳುತ್ತಿದೇವೆ. ಈ ಹೊಸ ವರ್ಷ ನಿಮ್ಮ ಜೀವನದಲ್ಲಿ ಹಲವು ಹೊಸತನಗಳೊಂದಿಗೆ ಹೊಸ ಹರ್ಷ ತರಲಿ ಎಂದು ಹಾರೈಸುತ್ತಾ… ಕುಲಾಲ್ ವರ್ಲ್ಡ್.ಕಾಮ್ನ ಎಲ್ಲಾ ಓದುಗರಿಗೆ, ಜಾಹೀರಾತುದಾರರಿಗೆ, ಹಿತೈಷಿಗಳಿಗೆ ಹೊಸ ವರ್ಷದ ಹಾರ್ದಿಕ ಶುಭಾಶಯಗಳು..
ದಿನೇಶ್ ಬಂಗೇರ ಇರ್ವತ್ತೂರು
(ವ್ಯವಸ್ಥಾಪಕ ಸಂಪಾದಕ)