ಮಂಜೇಶ್ವರ(ಡಿ.೨೪, ಕುಲಾಲ್ ವರ್ಲ್ಡ್ ನ್ಯೂಸ್): ಕೂಲಿ ಕೆಲಸ ಮಾಡಿ ಬದುಕು ನಿರ್ವಹಿಸುತ್ತಿರುವ ಕಡುಬಡ ಕುಟುಂಬದ ಮಹಿಳೆಯೊಬ್ಬರು ಮಾರಣಾಂತಿಕ ಕ್ಯಾನ್ಸರ್ ಖಾಯಿಲೆಯಿಂದ ನರಳುತ್ತಿದ್ದು, ತನ್ನ ಜೀವ ಉಳಿಸಲು ತಗಲುವ ಚಿಕಿತ್ಸಾ ವೆಚ್ಚಕ್ಕೆ ಹಣವಿಲ್ಲದೆ ಕಣ್ಣೀರಲ್ಲಿ ಕೈ ತೊಳೆಯುತ್ತಿದ್ದಾರೆ.
ಮಂಜೇಶ್ವರ ಸಮೀಪದ ಕುಂಜತ್ತೂರು ತೂಮಿನಾಡು ನಿವಾಸಿ ವಿಶ್ವನಾಥ ಮೂಲ್ಯ ಅವರ ಪತ್ನಿ ಗೀತಾ ಸಾಲ್ಯಾನ್ (50ವರ್ಷ) ಅವರು ಕಳೆದ ಮೂರು ವರ್ಷದ ಹಿಂದೆ ಎಲುಬು ಕ್ಯಾನ್ಸರ್ ಗೆ ತುತ್ತಾಗಿದ್ದರು. ಕೂಲಿ ಕೆಲಸ ಮಾಡಿ ಬದುಕುತ್ತಿರುವ ಈ ಕುಟುಂಬ ಸದ್ಯ ಸಂಪೂರ್ಣ ಸಾಲದಲ್ಲಿ ಮುಳುಗಿದ್ದು, ಸದ್ಯ ಚಿಕಿತ್ಸೆಗೆ ಹಣ ಹೊಂದಿಸಲು ದಿಕ್ಕು ತೋಚದೆ ಅಹೋರಾತ್ರಿ ಚಿಂತೆಯಲ್ಲೇ ದಿನ ದೂಡುವಂತಾಗಿದೆ.
ವಿಶ್ವನಾಥ-ಗೀತಾ ದಂಪತಿಗೆ ಒಬ್ಬ ಪುತ್ರನಿದ್ದು, ಕೂಲಿ ಕೆಲಸ ಮಾಡುತ್ತಿದ್ದ ಈತನಿಗೂ ಸದ್ಯ ಸರಿಯಾದ ಉದ್ಯೋಗವಿಲ್ಲ. ಹಿಂದೆ ದೇರಳಕಟ್ಟೆ ಕೆ ಎಸ್ ಹೆಗ್ಡೆ ಆಸ್ಪತ್ರೆಯಲ್ಲಿ ಆಯ ಆಗಿ ಕೆಲಸ ಮಾಡುತ್ತಾ, ಊರಿನಲ್ಲಿ ಈ ಹಿಂದೆ ಸಮಾಜಸೇವಕಿಯಾಗಿ ಗುರುತಿಸಿಕೊಂಡು, ಊರವರ ನೆರವಿಗೆ ಧಾವಿಸುತ್ತಿದ್ದ ಗೀತಾ ಅವರಿಗೆ ಸ್ವತಃ ಕ್ಯಾನ್ಸರ್ ಗೆ ಬಲಿಯಾಗಿದ್ದು ಬಡ ಮಹಿಳೆಯ ಬದುಕಿಗೆ ಬರಸಿಡಿಲು ಬಡಿದಂತಾಗಿದೆ. ಪ್ರಸ್ತುತ ತಾನು ದುಡಿಯುತ್ತಿದ್ದ ದೇರಳಕಟ್ಟೆ ಕೆ ಎಸ್ ಹೆಗ್ಡೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗೀತಾ ಅವರು ಜೀವ ಉಳಿಸಲು ಪರದಾಡುತ್ತಿದ್ದಾರೆ. ಚಿಕಿತ್ಸೆಗೆ ಹಣ ಹೊಂದಿಸಲು ದಿಕ್ಕು ತೋಚದೆ ಬರಿಗೈಯಲ್ಲಿ ಅಲೆದಾಡುತ್ತಿದ್ದು ಸಹೃದಯಿ ದಾನಿಗಳ ಸಹಾಯ ಹಸ್ತದ ನಿರೀಕ್ಷೆಯಲ್ಲಿದ್ದಾರೆ.
ಈ ಹಿನ್ನೆಲೆಯಲ್ಲಿ ಸಂಘ-ಸಂಸ್ಥೆಗಳು, ದಾನಿಗಳು ಚಿಕಿತ್ಸೆಗಾಗಿ ಕರುಣೆ ತೋರಿ ಆರ್ಥಿಕ ಸ್ಪಂದನೆ ನೀಡಿ ಕಡುಬಡ ಮಹಿಳೆಯ ಮೊಗದಲ್ಲಿ ಆನಂದ ಬಾಷ್ಪಮೂಡಿಸಬೇಕಾಗಿದೆ.
ನೊಂದಿರುವ ಮಹಿಳೆಗೆ ನೆರವಾಗಬಯಸುವ ದಾನಿಗಳು ಅವರ ಕೆಳಗಿನ ಬ್ಯಾಂಕ್ ಖಾತೆ ಹಣ ಕಳಿಸಬಹುದು.
Geetha Salian
North Malabar Gramin Bank
Kunjathur Branch
SB a/c No: 40459100002564
Ifsc code : KLGB0040459
phone : 9995579268
ಚಿತ್ರ-ಮಾಹಿತಿ: ರಾಜೇಶ್ ಮುಗುಳಿ