ಬಂಟ್ವಾಳ(ಡಿ.೨೧, ಕುಲಾಲ್ ವರ್ಲ್ಡ್ ನ್ಯೂಸ್): ಸರಕಾರ ಹಿಂದುಳಿದ ವರ್ಗಗಳ ಸಂಘ/ಸಂಘಟನೆಗಳಿಗೆ ಬೆಂಗಳೂರಿನಲ್ಲಿ ನಿವೇಶನ ನೀಡಿದ್ದು, ಇದರಲ್ಲಿ ಕುಂಬಾರ ಜನಾಂಗವನ್ನು ಕಡೆಗಣಿಸಲಾಗಿದೆ. ಆದ್ದರಿಂದ ಇದರಲ್ಲಿ ನಮ್ಮ ಜನಾಗದವರಿಗೂ ನಿವೇಶನ ಹೊಂದುವ ಅವಕಾಶ ನೀಡಬೇಕೆಂದು ಬಂಟ್ವಾಳ ತಾಲೂಕು ಕುಲಾಲ ಯುವ ವೇದಿಕೆ ಹಾಗೂ ಕುಲಾಲ ಹಿರಿಯ ನಾಗರೀಕ ವೇದಿಕೆ ವತಿಯಿಂದ ಜಿಲ್ಲಾ ಉಸ್ತುವಾರಿ ಸಚಿವರ ಮುಖಾಂತರ ಸರಕಾರಕ್ಕೆ ಮನವಿ ಇಂದು ಸಲ್ಲಿಸಲಾಯಿತು.
ಸಚಿವ ರಮಾನಾಥ ರೈ ಅವರ ಕಳ್ಳಿಗೆಯಲ್ಲಿರುವ ನಿವಾಸಕ್ಕೆ ತೆರಳಿದ ಸಂಘಟನೆ ಹಿರಿಯರು ಈ ಕುರಿತು ಮುಖ್ಯಮಂತ್ರಿ ಅವರ ಮನ ಒಲಿಸುವಂತೆ ಒತ್ತಾಯಿಸಿದರು. ಈ ಸಂದರ್ಭ ಕುಲಾಲ ಯುವ ವೇದಿಕೆಯ ನಾರಾಯಣ ಸಿ. ಪೆರ್ನೆ, ನಾಗರೀಕ ವೇದಿಕೆಯ ಸುಂದರ್ ಬಿ, ಶೇಷಪ್ಪ ಮಾಸ್ತರ್, ವಿಠಲ ಬಂಗೇರ, ಲಕ್ಷ್ಮಣ ಮಾರ್ನಬೈಲ್, ಸೋಮಯ್ಯ, ಪದ್ಮನಾಭ, ಕೃಷ್ಣಪ್ಪ, ಪರಮೇಶ್ವರ ಮೂಲ್ಯ, ಸುಕುಮಾರ ಬಂಟ್ವಾಳ, ಮನೋಹರ ನೇರಂಬೋಳು, ಸತೀಶ್ ಕುಮಾರ್, ರಮಾನಾಥ ವಿಟ್ಲ ಮೊದಲಾದವರು ಜೊತೆಗಿದ್ದರು.