ಬೆಳಗಾವಿ (ನ.೨೦, ಕುಲಾಲ್ ವರ್ಲ್ಡ್ ನ್ಯೂಸ್): ರಾಜ್ಯದ ಕುಂಬಾರರ ವಿವಿಧ ಬೇಡಿಕೆ ಈಡೇರಿಕೆ ಸಲುವಾಗಿ ಬೆಳಗಾವಿಯ ಸುವರ್ಣ ಸೌಧದ ಮುಂದೆ ಕರ್ನಾಟಕ ಪ್ರದೇಶ ಕುಂಬಾರರ ಸಂಘವು ಇಂದು (ನ.20ರಂದು) ಧರಣಿ ಸತ್ಯಾಗ್ರಹ ಹಮ್ಮಿಕೊಂಡಿದೆ.
ಸರ್ವಜ್ಞ ಪ್ರಾಧಿಕಾರ ರಚನೆ, ಕುಂಬಾರ ಅಭಿವೃದ್ಧಿ ಮಂಡಳಿಯನ್ನು ದೇವರಾಜ ಅರಸು ನಿಗಮದಿಂದ ಪತ್ಯೇಕಗೊಳಿಸುವುದು, ರಾಜ್ಯದಲ್ಲಿರುವ ಕುಂಬಾರರಿಗೆ ಒಟ್ಟಾರೆಯಾಗಿ ಒಂದೇ 2ಎ ಪ್ರಮಾಣ ಪತ್ರ, ಗುಡಿ ಕೈಗಾರಿಕೆಗೆ ಸಾಲ, ಸಹಾಯ ಧನ ನೀಡಿಕೆ ಮುಂತಾದವುಗಳ ಜೊತೆಗೆ ಬೆಳಗಾವಿ ಜಿಲ್ಲೆಯ ಕುಂಬಾರರ ಸ್ಥಳೀಯ ಬೇಡಿಕೆಗೆಳ ಈಡೇರಿಕೆ ಸಲುವಾಗಿ ಈ ಧರಣಿ ಸತ್ಯಾಗ್ರಹ ನಡೆಯಲಿದೆ ಎಂದು ಕರ್ನಾಟಕ ಪ್ರದೇಶ ಕುಂಬಾರರ ಸಂಘದ ರಾಜ್ಯಾಧ್ಯಕ್ಷ ಲಿಂಗರಾಜ ಕುಂಬಾರ ತಿಳಿಸಿದ್ದಾರೆ.
ವಿವಿಧ ಬೇಡಿಕೆ ಈಡೇರಿಸುವಂತೆ ಕರ್ನಾಟಕ ಪ್ರದೇಶ ಕುಂಬಾರರ ಸಂಘದಿಂದ ಧರಣಿ
Kulal news
1 Min Read