ಮಂಗಳೂರು(ನ.೧೩, ಕುಲಾಲ್ ವರ್ಲ್ಡ್ ನ್ಯೂಸ್): ತೊಕ್ಕೊಟ್ಟು ಸಮೀಪ ರೈಲು ಡಿಕ್ಕಿಯಾಗಿ ಪುತ್ತೂರಿನ ನಿವಾಸಿ ದಾಮೋದರ ಮೂಲ್ಯ (41ವರ್ಷ) ಅವರು ದಾರುಣವಾಗಿ ಮೃತಪಟ್ಟಿದ್ದಾರೆ.
ಪುತ್ತೂರಿನ ಸಾಮೆತ್ತಡ್ಕ ನಿವಾಸಿ ಜೋಗಿ ಮೂಲ್ಯ ಅವರ ಪುತ್ರರಾದ ದಾಮೋದರ ಅವರು ಈ ಹಿಂದೆ ತನ್ನ ಮನೆ ಸಮೀಪ ಗ್ಯಾರೇಜ್ ವೊಂದನ್ನು ನಡೆಸುತ್ತಿದ್ದರು. ಬಳಿಕ ಬೆಂಗಳೂರಿಗೆ ತೆರಳಿ ಹೋಟೆಲ್ ಉದ್ಯಮ ನಡೆಸುತ್ತಿದ್ದರು. ಯಾವುದೋ ಕಾರ್ಯಕ್ರಮ ನಿಮಿತ್ತ ತೊಕ್ಕೊಟ್ಟಿಗೆ ಆಗಮಿಸಿ ರೈಲ್ವೆ ಟ್ರ್ಯಾಕ್ ಬಳಿ ಮೊಬೈಲಿನಲ್ಲಿ ಮಾತನಾಡುತ್ತಾ ತೆರಳುತ್ತಿದ್ದಾಗ ರೈಲು ಬಂದಿರುವುದು ಅರಿವಾಗದೇ ಈ ದುರಂತ ಸಂಭವಿಸಿದೆ ಎಂದು ತಿಳಿದು ಬಂದಿದೆ.