ಮುಂಬಯಿ : ಮುಂಬಯಿ ಕುಲಾಲ ಸಂಘ ಇದರ ನೂತನ ಪದಾಧಿಕಾರಿಗಳ ಆಯ್ಕೆಯು ಇತ್ತೀಚೆಗೆ ನಡೆದಿದ್ದು, ಮುಂದಿನ ಎರಡು ವರ್ಷ ಅವಧಿಗೆ ಅಧ್ಯಕ್ಷರಾಗಿ ಪಿ.ದೇವದಾಸ್ ಕುಲಾಲ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಇದರ ಮ್ಯಾನೇಜರ್ ಆಗಿದ್ದು, ಪ್ರಸ್ತುತ ನಿವೃತ್ತರಾಗಿರುವ ಪಿ.ದೇವದಾಸ್ ಕುಲಾಲ್ ಅವರು ಕಳೆದ 37 ವರ್ಷಗಳಿಂದ ಮುಂಬಯಿ ಕುಲಾಲ ಸಂಘದಲ್ಲಿ ಸಕ್ರಿಯರಾಗಿದ್ದು, ಸಂಘದ ವಿವಿಧ ಪದಾಧಿಕಾರಿ ಹುದ್ದೆಗಳನ್ನು ನಿಭಾಯಿಸಿದ್ದಾರೆ. ಜ್ಯೋತಿ ಕೋ ಆಪರೇಟಿವ್ ಸೊಸೈಟಿ, ಡೊಂಬಿವಿಲಿ ತುಳು ವೆಲ್ಫೇರ್ ಅಸೋಸಿಯೇಷನ್ ತುಳುಶ್ರೀ ಕೋ ಆಪರೇಟಿವ್ ಸೊಸೈಟಿ, ಡೊಂಬಿವಿಲಿ ಕರ್ನಾಟಕ ಸಂಘಗಳಲ್ಲೂ ಸಕ್ರಿಯವಾಗಿರುವ ದೇವದಾಸ್ ಕುಲಾಲ್ ಮೂಲತಃ ಮಂಗಳೂರು ಪಡುಪಣಂಬೂರು ಗ್ರಾಮದ ಲೋಕಯ್ಯ- ರುಕ್ಕು ಕುಲಾಲ್ ದಂಪತಿಯ ಸುಪುತ್ರರು.
ಮುಂಬಯಿ ಕುಲಾಲ ಸಂಘದ ನೂತನ ಅಧ್ಯಕ್ಷರಾಗಿ ಪಿ.ದೇವದಾಸ್ ಕುಲಾಲ್ ಆಯ್ಕೆ
Kulal news
1 Min Read