ಮಂಗಳೂರು(ಅ.೨೯,ಕುಲಾಲ್ ವರ್ಲ್ಡ್ ನ್ಯೂಸ್): ಪುಣ್ಯಭೂಮಿ ತುಳುನಾಡ ಸೇವಾ ಫೌಂಡೇಷನ್ ಹಾಗೂ ಹಿಂದೂ ಸೇವಾ ವಿಭಾಗ್ ಮಂಗಳೂರು ಇದರ ಜಂಟಿ ಸಹಯೋಗದಲ್ಲಿ ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಜಪ್ಪಿನಮೊಗರು ತಂದೊಳಿಗೆ ಮನ್ವಿತಾ ಕುಲಾಲ್ ಗೆ ಚಿಕಿತ್ಸೆಗೆ ಆರ್ಥಿಕ ನೆರವು ನೀಡಲಾಯಿತು.
ಅ ೨೯ರಂದು ಮನ್ವಿತಾ ಅವರ ಮನೆಗೆ ತೆರಳಿದ ಈ ಸಂಘಟನೆಗಳ ಸದಸ್ಯರು ತಾವು ಸಂಗ್ರಹಿಸಿದ 38 ಸಾವಿರ ರೂಪಾಯಿ ಹಣವನ್ನು ಮನ್ವಿತಾ ಅವರ ಕುಟುಂಬಕ್ಕೆ ಹಸ್ತಾ೦ತರ ಮಾಡಿದರು. ಈ ಸಂದರ್ಭ ತುಳುನಾಡ ಸೇವಾ ಫೌಂಡೇಷನ್ ನ ದೇವಿ ಪ್ರಸಾದ್ ಶೆಟ್ಟಿ ವಿಟ್ಲ, ರಮೇಶ್ ಕುಮಾರ್ ವಗ್ಗ, ಗಣೇಶ್ ದಾಸ್ ಪಲ್ಲಮಜಲು, ಅಜಿತ್ ಪೂಜಾರಿ, ಉದಯ್ ಕುಮಾರ್ , ಕುಸುಮಾಕರ್ ಕುಂಪಲ ,ರಂಜಿತ್ ಮೂಡಬಿದಿರೆ, ಹೇಮಂತ್ ಕಿನ್ನಿಗೋಳಿ, ಯಶವಂತ್ ಮುಲ್ಕೆಜಮಾಡ ಹಾಗೂ ಹಿಂದೂ ಸೇವಾ ವಿಭಾಗ್ ಮಂಗಳೂರು ಇದರ ಸದಸ್ಯರಾದ ಪ್ರೇಂ ಪಾವೂರ್, ತೇಜಸ್ ಸುವರ್ಣ ಮೊದಲಾದವರು ಉಪಸ್ಥಿತರಿದ್ದರು.
ಮನ್ವಿತಾ ಅವರ ಕುರಿತು `ಕುಲಾಲ್ ವರ್ಲ್ಡ್ ಡಾಟ್ ಕಾಮ್’ ವರದಿ ಪ್ರಕಟಿಸಿದ್ದು ಇದಕ್ಕೆ ಸ್ಪಂದಿಸಿದ ದಾನಿಗಳು ಇದುವರೆಗೆ ನಾಲ್ಕೂವರೆ ಲಕ್ಷಕ್ಕೂ ಅಧಿಕ ನೆರವು ನೀಡಿ ಮಾನವೀಯತೆ ಮೆರೆದಿದ್ದಾರೆ.