ಮಂಗಳೂರು(ಅ.೨೮, ಕುಲಾಲ್ ವರ್ಲ್ಡ್ ನ್ಯೂಸ್): ಕಾರ್ನಿವಲ್ ಕುಡ್ಲ ಇದರ ವತಿಯಿಂದ ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಜಪ್ಪಿನಮೊಗರು ತಂದೊಳಿಗೆ ಮನ್ವಿತಾ ಕುಲಾಲ್ ಗೆ ಚಿಕಿತ್ಸೆಗೆ 70 ಸಾವಿರ ರೂ. ಆರ್ಥಿಕ ನೆರವು ನೀಡಲಾಯಿತು.
ಅಮೆರಿಕಾದ ಕಾರ್ನಿವಲ್ ಕ್ರೂಸ್ ಲೈನ್ಸ್ ನಲ್ಲಿ ಸೇವೆ ಸಲ್ಲಿಸುತ್ತಿರುವ ಕಾರ್ನಿವಲ್ ಕುಡ್ಲ ತಂಡದ ಪಿ.ವಿ ಸಜ್ಜೇಶ್ ಹಾಗು ಮಿಥುನ್ ಹೆಚ್ ಟಿ ಕುಲಾಲ್ ಇವರ ತಂಡ ಮನ್ವಿತಾ ಕುಲಾಲ್ ಗೆ ಚಿಕಿತ್ಸೆಗೆ ಹಣವನ್ನ ಸಂಗ್ರಹಿಸಿದ್ದು, ಕುಲಾಲ ಯುವ ವೇದಿಕೆ ಕುಡ್ಲ ಇದರ ಅಧ್ಯಕ್ಷರಾದ ಪ್ರಶಾಂತ್ ಶಕ್ತಿನಗರ ಇದನ್ನ ಸಂಯೋಜಿಸಿದ್ದರು. ಅ.೨೮ರಂದು ಮನ್ವಿತಾ ಕುಲಾಲ್ ಮನೆಗೆ ತೆರಳಿದ ತಂಡದ ಸದಸ್ಯರು ಮಂಗಳೂರು ಮೇಯರ್ ಕವಿತಾ ಸನಿಲ್ ಅವರ ಸಮ್ಮುಖದಲ್ಲಿ ಹಣ ಹಸ್ತಾ೦ತರಿಸಿದರು.