ಬೆಳ್ತಂಗಡಿ : ತಾಲೂಕು ಕುಲಾಲ ಕುಂಬಾರ ಹಕ್ಕೊತ್ತಾಯ ಸಮಿತಿ ಇದರ ವತಿಯಿಂದ ನಡೆಯುವ “ಬೃಹತ್ ಹಕ್ಕೊತ್ತಾಯ” ಸಮಾವೇಶದ ಪೂರ್ವಭಾವಿ ಸಭೆಯು ದಿನಾಂಕ 17/09/2017 ರಂದು ಬೆಳಿಗ್ಗೆ 10 ಗಂಟೆಗೆ ಗುರುವಾಯನಕೆರೆ ಕುಲಾಲ ಮಂದಿರದಲ್ಲಿ ನಡೆಯಿತು.
ಪದ್ಮಮೂಲ್ಯ ಅನಿಲಡೆ ಮತ್ತು ಹೆಚ್. ಪದ್ಮಕುಮಾರ್ ಇವರ ಹಿರಿತನದಲ್ಲಿ ಹಾಗೂ ಹರೀಶ್ ಕಾರಿಂಜ ಇವರ ನೇತೃತ್ವದಲ್ಲಿ, ಬೆಳ್ತಂಗಡಿ ತಾಲೂಕು ಹಕ್ಕೊತ್ತಾಯ ಸಮಿತಿ ಇದರ ಆಶ್ರಯದಲ್ಲಿ ಬೆಳ್ತಂಗಡಿ ತಾಲೂಕು ಮೂಲ್ಯರ ಯಾನೆ ಕುಂಬಾರರ ಸೇವಾ ಸಂಘ ಗುರುವಾಯನಕೆರೆ ಮತ್ತು ಬೆಳ್ತಂಗಡಿ ತಾಲೂಕು ಕುಲಾಲ/ ಕುಂಬಾರರ ಯುವ ವೇದಿಕೆಯ ಜಂಟಿ ಸಹಕಾರದೊಂದಿಗೆ ಸಭೆ ನಡೆಯಿತು.
ತಾಲೂಕಿನ ಸಂಘಗಳ ಅದ್ಯಕ್ಷರುಗಳು, ಕಾರ್ಯದರ್ಶಿಗಳು, ಪದಾಧಿಕಾರಿಗಳು, ಸಂಘಟನಾ ಕಾರ್ಯದರ್ಶಿಗಳು, ಸರ್ವ ಸದಸ್ಯರು, ತಾಲೂಕಿನ ಸ್ವಜಾತಿ ನಾಯಕರು, ಪಂಚಾಯತ್ ಸದಸ್ಯರುಗಳು, ಸರ್ಕಾರಿ ನೌಕರರು, ಸ್ವಜಾತಿ ಉದ್ಯಮಿಗಳು, ವಾಹನ ಚಾಲಕ ಹಾಗೂ ಮಾಲಕರು, ಕೂಲಿ ಕಾರ್ಮಿಕರು, ವಿದ್ಯಾರ್ಥಿಗಳು ಹಾಗೂ ಸಮಸ್ತ ಸ್ವಜಾತಿ ಬಂಧವರೆಲ್ಲರು ಭಾಗವಹಿಸಿ ಸಲಹೆ ಸೂಚನೆಯನ್ನು ನೀಡಿದರು.
ಅದರಂತೆ ಮುಂದಿನ ಸಮಾಲೋಚನಾ ಸಭೆಯು ದಿನಾಂಕ 24.09.2017ರಂದು ಮಧ್ಯಾಹ್ನ ನಂತರ 3.00 ಗಂಟೆಗೆ ಗುರುವಾಯನಕೆರೆ ಕುಲಾಲ ಮಂದಿರದಲ್ಲಿ ನಡೆಯಲಿದೆ.