ಬಂಟ್ವಾಳ: ತುಳುನಾಡಿನ ಕಾರಣಿಕ ಕ್ಷೇತ್ರ ಪಣೋಲಿಬೈಲು ಶ್ರೀ ಕಲ್ಲುರ್ಟಿ ದೈವಸ್ಥಾನದ ಪ್ರಧಾನ ಅರ್ಚಕ ಬಾಬು ಮೂಲ್ಯರವರು ನಿಧನರಾಗಿದ್ದಾರೆಂದು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹಬ್ಬಿಸಿರುವವರ ಬಗ್ಗೆ ಅವರ ಮೊಮ್ಮಗ ಹರ್ಷಿತ್ ಎಂಬವರು ಬಂಟ್ವಾಳ ನಗರ ಠಾಣೆಗೆ ದೂರು ನೀಡಿದ್ದಾರೆ.
97 ವರ್ಷ ಪ್ರಾಯದ ಬಾಬು ಮೂಲ್ಯರವರು ಆರೋಗ್ಯರಾಗಿದ್ದು ದೈವಸ್ಥಾನಕ್ಕೆ ಬಂದ ಭಕ್ತರೊಬ್ಬರು ಅವರ ಭಾವಚಿತ್ರ ಕ್ಲಿಕ್ಕಿಸಿ ಮೃತಪಟ್ಟಿರುವುದಾಗಿ ಸುಳ್ಳು ಸುದ್ದಿ ಹಬ್ಬಿಸಿ ಸಾರ್ವಜನಿಕ ವಲಯದಲ್ಲಿ ಆತಂಕ ಸೃಷ್ಟಿಸಿದ್ದಾರೆ. ಸುಳ್ಳು ಸುದ್ದಿ ಹಬ್ಬಿಸಿರುವ ಅರೋಪಿಯನ್ನು ಪತ್ತೆ ಹಚ್ಚಿ ಅವರ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಆಗ್ರಹಿಸಿದ್ದಾರೆ.
ಬಾಬು ಮೂಲ್ಯರವರು ಪ್ರಸ್ತುತ ಆರೋಗ್ಯವಂತರಾಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಪಡಿಸುವಂತಹ ಯಾವದೇ ಘಟನಗಳು ನಡೆದಿಲ್ಲ ಎಂದು ಸಜೀಪಮೂಡ ಗ್ರಾ.ಪಂ.ಸದಸ್ಯ, ಪಣೋಲಿಬೈಲು ಕ್ಷೇತ್ರದ ಭಂಡಾರದ ಮನೆಯ ರಮೇಶ್ ಎಂ. ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದ್ದಾರೆ.