ಮಂಗಳೂರು(ಸೆ.೦೯, ಕುಲಾಲ್ ವರ್ಲ್ಡ್ ನ್ಯೂಸ್) : ವಿಶ್ವ ಹಿಂದೂ ಪರಿಷತ್ ಸುರತ್ಕಲ್ ಪ್ರಖಂಡದ ಅಧ್ಯಕ್ಷ ವೇಣುಗೋಪಾಲ್ (56) ಅವರು ಅಸೌಖ್ಯದಿಂದ ನಿಧನ ಹೊಂದಿದರು.
ಸುರತ್ಕಲ್ ನ ಖ್ಯಾತ ಧೂಮ ಮೂಲ್ಯ ಮನೆತನದ ಇವರು ಸುರತ್ಕಲ್ ಪರಿಸರದಲ್ಲಿ 1970ರ ವೇಳೆಗೆ ಹಿಂದು ಜಾಗರಣ ವೇದಿಕೆಗೆ ಬುನಾದಿ ಹಾಕಿದವರಲ್ಲಿ ಒಬ್ಬರಾಗಿದ್ದು, ಚತುರ ಸಂಘಟಕರಾಗಿ ಗುರುತಿಸಿಕೊಂಡಿದ್ದರು.
ಸುರತ್ಕಲ್ ಕುಲಾಲ್ ಸಂಘದ ಬೆಳವಣಿಗೆಯ ಹಿಂದಿರುವ ಶಕ್ತಿಗಳಲ್ಲಿ ಒಬ್ಬರಾಗಿರುವ ವೇಣುಗೋಪಾಲ್ ಕರಾವಳಿಯ ಕುಲಾಲ-ಕುಂಬಾರ ಯುವ ವೇದಿಕೆಯ ಮಾರ್ಗದರ್ಶಕರೂ ಆಗಿದ್ದರು. ಮೃತರು ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ. ವಿವಿಧ ಹಿಂದೂ ಸಂಘಟನೆ ವತಿಯಿಂದ ಇವರ ಅಂತಿಮ ನಮನ ಸೆ.೧೦ರಂದು ಬೆಳಿಗ್ಗೆ ನಡೆಯಲಿದೆ.