ಮಂಗಳೂರು(ಫೆ.೧೯): ಸುರತ್ಕಲ್ ಕುಲಾಲ ಸಂಘದ 38ನೇ ವಾರ್ಷಿಕೋತ್ಸವ ಹಾಗೂ `ಸರ್ವಜ್ಞ ‘ಮಿನಿ ಹಾಲ್ ಉದ್ಘಾಟನೆಯು ಮಾರ್ಚ್ 5ರಂದು ನಡೆಯಲಿದೆ. ಮಿನಿ ಸಭಾಭವನದ ಉದ್ಘಾಟನೆಯನ್ನು ಕರಾವಳಿ ಕುಲಾಲ/ಕುಂಬಾರ ಯುವ ವೇದಿಕೆಯ ಸ್ಥಾಪಕಾಧ್ಯಕ್ಷ ಅಣ್ಣಯ್ಯ ಕುಲಾಲ್ ಮಾಡಲಿದ್ದಾರೆ. ೩೦ಕೆವಿ ಜನರೇಟರನ್ನು ದ.ಕ ಕುಲಾಲರ ಮಾತೃ ಸಂಘದ ಅಧ್ಯಕ್ಷ ಸುಜೀರ್ ಕುಡುಪು ನೆರವೇರಿಸಲಿದ್ದಾರೆ. ಬಳಿಕ ಸಂಘದ ಅಧ್ಯಕ್ಷ ಸುಧಾಕರ ಕುಲಾಲ್ ಅಧ್ಯಕ್ಷತೆಯಲ್ಲಿ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಬೆಂಗಳೂರಿನ ದ. ಕ ಕುಲಾಲ ಸಂಘದ ಅಧ್ಯಕ್ಷ ಎ. ಎನ್ ಕುಲಾಲ್, ಬರ್ಕೆ ಫ್ರೆಂಡ್ಸ್ ನ ಸ್ಥಾಪಕಾಧ್ಯಕ್ಷ ಯಜ್ಞೆಶ್ ಕುಲಾಲ್ ಭಾಗವಹಿಸಲಿದ್ದಾರೆ.
ಇದೇ ವೇಳೆ ಬಾಳ ಬೂಬ ಮೂಲ್ಯ ಕೃಷ್ಣಾಪುರ, ರಾಮಣ್ಣ ಕುಲಾಲ್ ಪೆರ್ಡೂರು, ರಶ್ಮಿ ಎಸ್ ಕುಲಾಲ್, ಧೃತಿ ಕುಲಾಲ್ ಮುಂತಾದ ಸಾಧಕರಿಗೆ ಸನ್ಮಾನ ನಡೆಯಲಿದೆ. ಇದಕ್ಕೂ ಮುನ್ನ ಸಾರ್ವಜನಿಕ ಸತ್ಯನಾರಾಯಣ ಪೂಜೆ ನಡೆಯಲಿದ್ದು, ಸಭಾ ಕಾರ್ಯಕ್ರಮದ ಬಳಿಕ ಕುಲಾಲ ಸಂಘದ ಸದಸ್ಯರಿಂದ `ಮಣ್ಣಲ್ಲಿ ಹೊನ್ನ ಕಂಡ ಕುಂಬಾರ’ ವಿಶಿಷ್ಠ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.