ಮಂಗಳೂರು(ಡಿ.೦೩): ಭಾರತ್ ದೂರ ಸಂಚಾರ ನಿಗಮದ (BSNL) ದ.ಕ ಹಾಗೂ ಉಡುಪಿ ಜಿಲ್ಲಾ ಸಲಹಾ ಸಮಿತಿಯ ಸದಸ್ಯರಾಗಿ ಡಾ. ಅಣ್ಣಯ್ಯ ಕುಲಾಲ್ ಪುನರಾಯ್ಕೆಯಾಗಿದ್ದಾರೆ.
ಡಾ. ಕುಲಾಲ್ ಅವರ ಸಮಾಜ ಸೇವೆ ಮತ್ತು ಹೋರಾಟವನ್ನು ಗುರುತಿಸಿ ಈ ಆಯ್ಕೆ ನಡೆದಿದೆ. ಅವರು ಭಾರತೀಯ ವೈದ್ಯಕೀಯ ಸಂಘದ (ಐಎಂಎ) ರಾಷ್ಟ್ರೀಯ ಸ್ಥಾಯಿ ಸಮಿತಿ ಸದಸ್ಯರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.