ಮಂಗಳೂರು(ನ.೦೫): ಭಾರತೀಯ ವೈದ್ಯಕೀಯ ಸಂಘದ ರಾಷ್ಟ್ರ ಘಟಕ ನವದೆಹಲಿಯು ಕಳೆದ ನಾಲ್ಕಾರು ದಶಕಗಳಿಂದ ಜನಜಾಗೃತಿಗಾಗಿ ಹಮ್ಮಿಕೊಂಡಿರುವ “ಹೆಣ್ಣು ಶಿಶು ಉಳಿಸಿ, ಬೆಳೆಸಿ ಹಾಗೂ ಓದಿಸಿ” ಆಂದೋಲನದಲ್ಲಿ ರಾಜ್ಯ ಮಟ್ಟದಲ್ಲಿ ಮಾಡಿದ ಜನಜಾಗೃತಿಗಾಗಿ ಡಾ. ಎಂ. ಅಣ್ಣಯ್ಯ ಕುಲಾಲ್ ಉಳ್ತೂರು ಇವರಿಗೆ ತುಮಕೂರಿನಲ್ಲಿ ಜರುಗಿದ ರಾಜ್ಯ ವೈದ್ಯ ಸಮ್ಮೇಳನದಲ್ಲಿ ಕರ್ನಾಟಕ ರಾಜ್ಯ ಸರಕಾರದ ಗೃಹ ಸಚಿವರಾದ ಡಾ. ಪರಮೇಶ್ವರ ಅವರು ಭಾರತೀಯ ವೈದ್ಯಕೀಯ ಸಂಘದ ರಾಜ್ಯ ಪದಾಧಿಕಾರಿಗಳ ಉಪಸ್ಥಿತಿಯಲ್ಲಿ ಪ್ರಶಸ್ತಿ ಪ್ರದಾನ ಮಾಡಿದರು. ಅಣ್ಣಯ್ಯ ಅವರು ಕುಲಾಲ್ ಹೆಲ್ತ್ ಸೆಂಟರ್, ಪುಟ್ಟಣ್ಣ ಕುಲಾಲ್ ಪ್ರತಿಷ್ಠಾನ, ಯುವಕ ಮಂಡಲ, ಕನ್ನಡ ಕಟ್ಟೆ, ಮಹಿಳಾ ಮತ್ತು ಮಕ್ಕಳ ಹಕ್ಕು ಆಯೋಗದ ಸಹಯೋಗಗಳಲ್ಲಿ ಮಾಡಿದ ಸಮಾಜಮುಖಿ ಜನಜಾಗೃತಿ ಮೂಡಿಸುತ್ತಿರುವುದನ್ನು ಪರಿಗಣಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿತ್ತು.
ಹೆಣ್ಣು ಶಿಶು ಉಳಿಸಿ ಅಭಿಯಾನ : ಡಾ. ಎಂ. ಅಣ್ಣಯ್ಯ ಕುಲಾಲ್’ಗೆ ಪ್ರಶಸ್ತಿ ಪ್ರದಾನ
Kulal news
1 Min Read