ಮಂಗಳೂರು : ದ .ಕ.ಜಿಲ್ಲಾ ಮೂಲ್ಯರ ಯಾನೆ ಕುಲಾಲ ಸಂಘದ ವತಿಯಿಂದ ಸಮಾಜದ ಕುಲಾಲ ಬಾಂಧವರಿಗಾಗಿ ಮಂಗಳೂರು ಮತ್ತು ಮಣಿಪಾಲ ಕೆಎಂಸಿ ಯ ಆರೋಗ್ಯ ಸುರಕ್ಷಾ ಯೋಜನೆಯ ಫಲಾನುಭವಿಯಾಗಲು ಅವಕಾಶ ಕಲ್ಪಿಸಿಕೊಟ್ಟಿರುತ್ತಾರೆ. ಸಪ್ಟಂಬರ್ 15 ರ ಒಳಗೆ ಅರ್ಜಿ ಫಾರಂನ್ನು ಭರ್ತಿ ಮಾಡಿ ಕಳುಹಿಸಿಕೊಟ್ಟರೆ ಅಕ್ಟೋಬರ್ ತಿಂಗಳ ಮೊದಲ ತಾರೀಕಿನಿಂದಲೇ ನಿಮಗೆ ಪ್ರಯೋಜನ ಸಿಗುತ್ತದೆ. ಆದುದರಿಂದ ಅರ್ಜಿ ಫಾರಂನ್ನು ಸಮಯಕ್ಕೆ ಮುಂಚಿತವಾಗಿ ತುಂಬಿಸಬೇಕು. ಅರ್ಜಿಯನ್ನು ಹತ್ತಿರದ ಸಂಘದ ವಿಳಾಸವನ್ನು ಕಳಿಸಿದ್ದಲ್ಲಿ ಸಂಘಕ್ಕೆ ಕಳುಹಿಸಿ ಕೊಡಬಹುದು ಅಥವಾ ಶ್ರೀ ಸದಾನಂದ ಬಿಕರ್ನಕಟ್ಟೆ 9483032525, 9483030600 ಅಥವಾ ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ಶ್ರೀ ಪ್ರಸಾದ್ ಕುಲಾಲ ಸಿದ್ದಕಟ್ಟೆ 9480601187 ಗೆ ಕರೆ ಮಾಡಿ. ದ.ಕ.ಜಿಲ್ಲಾ ಮೂಲ್ಯರ ಯಾನೆ ಕುಲಾಲ ಸಂಘ (ರಿ) ಮಂಗಳೂರು ಪೋಲಿಸ್ ಲೇನ್ ನಲ್ಲಿ ಅರ್ಜಿ ಲಭ್ಯವಿರುತ್ತದೆ.
ಕುಲಾಲ ಸಮಾಜ ಬಾಂಧವರಿಗಾಗಿ `ಆರೋಗ್ಯ ಸುರಕ್ಷಾ ಯೋಜನೆ’
Kulal news
1 Min Read