ಪಡುಬಿದ್ರಿ : ಉಡುಪಿ ತಾಲೂಕು ಎಲ್ಲೂರು ಗ್ರಾಮದ ಉಳ್ಳೂರು ಕೆಮ್ಮುಂಡೇಲು ನಿವಾಸಿ, ದಿ.ಜಯರಾಮ ಕುಲಾಲರ ಪುತ್ರಿ ಶರ್ಮಿಳಾ ಕುಲಾಲ್ (23) ಪತ್ತೆಯಾಗಿದ್ದಾಳೆ. ಈಕೆಯನ್ನು ಪೊಲೀಸರು ಸಾಂಗ್ಲಿಯ ಗ್ರಾಮವೊಂದರಲ್ಲಿ ಪತ್ತೆಹಚ್ಚಿದ್ದಾರೆ.
ಕಳೆದ ಬುಧವಾರ ಬೆಳಿಗ್ಗೆ ಮನೆ ಸಮೀಪದ ಗುಡ್ಡೆಗೆ ಹೋಗಿ ಬರುವುದಾಗಿ ತಿಳಿಸಿ ಹೋಗಿದ್ದ ಆಕೆ ವಾಪಸ್ ಬಾರದೆ ನಾಪತ್ತೆಯಾಗಿದ್ದಳು. ಸ್ಥಳೀಯ ಅನ್ಯ ಕೋಮಿನ ಯುವಕನೊಬ್ಬ ಈಕೆಗೆ ಕೆಲಸದ ಆಮಿಷವೊಡ್ಡಿ ಕರೆದೊಯ್ದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಆತ ಗಾರ್ಮೆಂಟ್ಸ್ ಸಂಸ್ಥೆಯೊಂದರಲ್ಲಿ ಉದ್ಯೋಗಿಯಾಗಿದ್ದು, ಉತ್ತಮ ಕೆಲಸಕೊಡಿಸುವ ಭರವಸೆ ನೀಡಿ ಕೆರೆದೊಯ್ದಿದ್ದು, ಸಾಂಗ್ಲಿಯ ಹಳ್ಳಿಯೊಂದರ ಆತನ ಸಂಬಂಧಿಕರ ಮನೆಯಲ್ಲಿ ಇರಿಸಿ ಬಳಿಕ ನಾಪತ್ತೆಯಾಗಿದ್ದ.
ಕಾಣೆಯಾಗಿದ್ದ ಎಲ್ಲೂರಿನ ಯುವತಿ ಪತ್ತೆ
Kulal news
1 Min Read