ಬಂಟ್ವಾಳ : ಕರ್ನಾಟಕ ರಾಜ್ಯ ಇಂಟಕ್ ನ ಬಂಟ್ವಾಳ ತಾಲೂಕು ಅಧ್ಯಕ್ಷರಾಗಿ ವಿಟ್ಲ ಗ್ರಾಮ ಪಂಚಾಯತ್ ನ ಮಾಜಿ ಅಧ್ಯಕ್ಷ ರಮಾನಾಥ ವಿಟ್ಲ ಆಯ್ಕೆಯಾಗಿದ್ದಾರೆ.
ದ.ಕ ಯುವ ಕಾಂಗ್ರೆಸ್ ಸಂಘಟನಾ ಕಾರ್ಯದರ್ಶಿ, ವಿಟ್ಲ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷರಾಗಿ, ಎರಡು ಅವಧಿಯ ಪ್ರಧಾನ ಕಾರ್ಯದರ್ಶಿಯಾಗಿದ್ದ ಇವರು ದ.ಕ ಜಿಲ್ಲಾ ಇತರೆ ಹಿಂದುಳಿದ ವರ್ಗ ವಿಭಾಗದ ಡಿಸಿಸಿ ಅಧ್ಯಕ್ಷರಾಗಿ ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಜಿಲ್ಲಾ ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಕರ್ನಾಟಕ ರಾಜ್ಯ ಇಂಟಕ್ ಗೌರವ ಸಲಹೆಗಾರ ಎನ್ .ಎಂ ಅಡ್ಯಂತಾಯ ಮಾರ್ಗದರ್ಶನದಂತೆ ಕಾರ್ಯಾಧ್ಯಕ್ಷ ರಾಕೇಶ್ ಮಲ್ಲಿ ಆದೇಶದ ಮೇರೆಗೆ ಜಿಲ್ಲಾಧ್ಯಕ್ಷ ಮನೋಹರ್ ಶೆಟ್ಟಿ ತಾಲೂಕು ಇಂಟಕ್ ಸಮಿತಿ ರಚಿಸಿದ್ದಾರೆ.
ಬಂಟ್ವಾಳ ಇಂಟಕ್ ಅಧ್ಯಕ್ಷರಾಗಿ ರಮಾನಾಥ ವಿಟ್ಲ ಆಯ್ಕೆ
Kulal news
1 Min Read