ಪುತ್ತೂರು : ಸರಕಾರಿ ಪದವಿ ಪೂರ್ವ ಕಾಲೇಜು ಪ್ರಥಮ ಪಿಯುಸಿ ಕಲಾ ವಿಭಾಗದ ವಿದ್ಯಾರ್ಥಿನಿ ಕುಮಾರಿ ಶಬ್ಧ ಎಂ.ವಿ (೧೬) ಎಂಬಾಕೆ ನೆಲ್ಯಾಡಿಯ ತನ್ನ ಅಜ್ಜಿ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಮೂಲತಃ ಕೊಡಗು ಸೋಮವಾರ ಪೇಟೆಯ ನಿವಾಸಿಯಾಗಿರುವ ವಸಂತ-ಲಕ್ಷ್ಮಿ ದಂಪತಿಯ ಮಗಳಾಗಿರುವ ಶಬ್ಧ ಪಿಯುಸಿ ಶಿಕ್ಷಣವನ್ನು ಉಪ್ಪಿನಂಗಡಿಯ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪಡೆಯುತ್ತಿದ್ದು, ಅದಕ್ಕಾಗಿ ನೆಲ್ಯಾಡಿಯ ಹೊಸಮಜಲು ಎಂಬಲ್ಲಿರುವ ತನ್ನ ಅಜ್ಜಿ ಮನೆಯಲ್ಲಿ ವಾಸ್ತವ್ಯ ಹೊಂದಿದ್ದಳು.
ಕಾಲೇಜು ಶಿಕ್ಷಣದ ಅವಧಿಯಲ್ಲಿ ಈಕೆ ಯಾವನೋ ಹುಡುಗನೊಂದಿಗೆ ಪ್ರೇಮಾಂಕುರಗೊಂಡಿದ್ದಾಳೆಂಬ ಮಾಹಿತಿ ಅಜ್ಜಿ ಮನೆಯವರಿಗೆ ಗೊತ್ತಾಗಿ ಆಕೆಯ ತಂದೆಗೆ ವಿಚಾರ ತಿಳಿಸಿದ ಹಿನ್ನೆಲೆಯಲ್ಲಿ ವಿದ್ಯಾರ್ಥಿ ಈ ಕೃತ್ಯವೆಸಗಿದ್ದಾಳೆನ್ನಲಾಗಿದೆ.
ವಿದ್ಯಾರ್ಥಿನಿಯು ಹೊಂದಿದ್ದ ಮೊಬೈಲ್ನ್ನು ಪರಿಶೀಲನೆಗೆ ಒಳಪಡಿಸಲಾಗಿದ್ದು, ಉಪ್ಪಿನಂಗಡಿ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಪ್ರಥಮ ಪಿಯುಸಿ ವಿದ್ಯಾರ್ಥಿನಿ ನೇಣು ಬಿಗಿದು ಆತ್ಮಹತ್ಯೆ
Kulal news
1 Min Read