ಬಂಟ್ವಾಳ: ವಿವಾಹ ನಿಶ್ಚಿತಾರ್ಥವಾಗಿದ್ದ ಯುವಕನೋರ್ವ ತನ್ನ ಮನೆಯಲ್ಲೇ ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ಚೆನ್ನೈತ್ತೋಡಿ ಗ್ರಾ ಪಂ ವ್ಯಾಪ್ತಿಯ ಬಸ್ತಿಕೋಡಿ ಎಂಬಲ್ಲಿ ಸೋಮವಾರ ನಡೆದಿದೆ.
ಇಲ್ಲಿನ ನಿವಾಸಿ ದಿವಂಗತ ಸಂಕಪ್ಪ ಮೂಲ್ಯ ಎಂಬವರ ಪುತ್ರ ಬಾಲಕೃಷ್ಣ ಮೂಲ್ಯ (32) ಎಂಬವರೇ ಆತ್ಮಹತ್ಯೆಗೆ ಶರಣಾದ ಯುವಕ. ಮೇಸ್ತ್ರಿ ಕೆಲಸಗಾರರಾಗಿದ್ದ ಅವರಿಗೆ ಮುಂದಿನ ತಿಂಗಳು ವಿವಾಹ ನಿಗದಿಯಾಗಿತ್ತು.
ಸೋಮವಾರ ಕೆಲಸಕ್ಕೆ ರಜೆ ಮಾಡಿ ಮನೆಯಲ್ಲಿದ್ದರು. ಮನೆ ಮಂದಿ ಕಾರ್ಯ ನಿಮಿತ್ತ ಹೊರಗಡೆ ತೆರಳಿದ್ದ ಸಂದರ್ಭ ತನ್ನ ಕೊಠಡಿಯಲ್ಲಿ ನೇಣು ಬಿಗಿದುಕೊಂಡು ಈ ಕೃತ್ಯ ಎಸಗಿದ್ದಾರೆ. ಮನೆಮಂದಿ ಬಂದ ಬಳಿಕ ಘಟನೆ ಬೆಳಕಿಗೆ ಬಂದಿದೆ. ಆರ್ಥಿಕ ಮುಗ್ಗಟ್ಟು ಆತ್ಮಹತ್ಯೆಗೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ. ಮೃತರು ತಾಯಿ ಮತ್ತು ಇಬ್ಬರು ಸಹೋದರರರನ್ನು ಅಗಲಿದ್ದಾರೆ.
ವಿವಾಹ ನಿಶ್ಚಯವಾಗಿದ್ದ ಯುವಕ ನೇಣು ಬಿಗಿದು ಆತ್ಮಹತ್ಯೆ
Kulal news
1 Min Read