ಮಂಗಳೂರು : ಭಾರತೀಯ ವೈದ್ಯಕೀಯ ಸಂಘದ (ಐಎಂಎ) ರಾಷ್ಟ್ರೀಯ ಸ್ಥಾಯಿ ಸಮಿತಿ ಸದಸ್ಯರಾಗಿ ವೈದ್ಯ ಅಣ್ಣಯ್ಯ ಕುಲಾಲ್ ನೇಮಕಗೊಂಡಿದ್ದಾರೆ. ಐಎಂಎ ರಾಷ್ಟ್ರೀಯ ಅಧ್ಯಕ್ಷರಾದ ಎಸ್ . ಎಸ್ ಅಗರ್’ವಾಲ್ ಈ ನೇಮಕ ಮಾಡಿದ್ದಾರೆ. ಕುಲಾಲ್ ಅವರು ಕಳೆದ ೧೫ ವರ್ಷಗಳಿಂದ ಐಎಂಎ ಸಕ್ರಿಯ ಸದಸ್ಯರಾಗಿದ್ದು, ಐಎಂಎ ಮಂಗಳೂರು ಘಟಕದ ಅಧ್ಯಕ್ಷರಾಗಿ, ಕಾರ್ಯದರ್ಶಿಯಾಗಿ ಸಹಿತ ವಿವಿಧ ಸ್ತರಗಳಲ್ಲಿ ಸೇವೆ ಸಲ್ಲಿಸಿದ್ದು, ರಾಷ್ಟ್ರೀಯ ಪ್ರಶಸ್ತಿಯನ್ನೂ ಪಡೆದಿದ್ದಾರೆ.
ಭಾರತೀಯ ವೈದ್ಯಕೀಯ ಸಂಘವು (ಐಎಂಎ) ಭಾರತದ ಒಂದು ಅತಿದೊಡ್ಡ ಸರ್ಕಾರೇತರ ವೈದ್ಯರ ಸಂಸ್ಥೆಯಾಗಿದ್ದು, 2.15 ಲಕ್ಷಕ್ಕೂ ಅಧಿಕ ಸದಸ್ಯರನ್ನು ಹಾಗೂ 1,650ಕ್ಕೂ ಅಧಿಕ ಶಾಖೆಗಳನ್ನು ಹೊಂದಿದೆ. ವೈದ್ಯಕೀಯ ಮತ್ತು ಸಂಬಂಧಿತ ವಿಜ್ಞಾನಗಳನ್ನು ತನ್ನೆಲ್ಲಾ ಶಾಖೆಗಳಲ್ಲಿ ಉತ್ತೇಜಿಸುವುದು ಮತ್ತು ಬೆಳೆಸುವುದು ಹಾಗೂ ಸಾರ್ವಜನಿಕ ಸ್ವಾಸ್ಥ್ಯ ಮತ್ತು ವೈದ್ಯಕೀಯ ಶಿಕ್ಷಣವನ್ನು ಭಾರತದಲ್ಲಿ ಸುಧಾರಿಸುವುದು, ವೈದ್ಯಕೀಯ ವೃತ್ತಿಯ ಗೌರವ ಮತ್ತು ಪ್ರತಿಷ್ಠೆಗಳನ್ನು ಕಾಪಾಡುವುದು ಮತ್ತು ವೈದ್ಯಕೀಯ ವೃತ್ತಿಯ ಹಿತಾಸಕ್ತಿಯನ್ನು ಎತ್ತಿಹಿಡಿಯುವುದು ಹಾಗೂ ಸದಸ್ಯರಲ್ಲಿ ಸಹಕಾರ ಮನೋಭಾವವನ್ನು ಬೆಳೆಸುವುದು ಭಾರತೀಯ ವೈದ್ಯಕೀಯ ಸಂಸ್ಥೆಯ ಉದ್ದೇಶವಾಗಿದೆ.
ಐಎಂಎ ರಾಷ್ಟ್ರೀಯ ಸ್ಥಾಯಿ ಸಮಿತಿ ಸದಸ್ಯರಾಗಿ ಡಾ. ಅಣ್ಣಯ್ಯ ಕುಲಾಲ್ ನೇಮಕ
Kulal news
1 Min Read