ಮಂಗಳೂರು : ಮಂಗಳೂರು ತಾಲೂಕು ಸರಕಾರಿ ಎನ್ ಪಿಎಸ್ (ಹೊಸ ಪಿಂಚಣಿ ಯೋಜನೆ) ನೌಕರರ ಸಂಘದ ಉಪಾಧ್ಯಕ್ಷರಾಗಿ ವಿಶ್ವನಾಥ ಬೈಲಮೂಲೆ ಆಯ್ಕೆಯಾಗಿದ್ದಾರೆ. ಇತ್ತೀಚೆಗೆ ಸಂಘದ ಪದಾಧಿಕಾರಿಗಳು ಹಾಗೂ ನೌಕರರ ಸಭೆಯು ಬಲ್ಮಠ ಸರಕಾರಿ ಕಾಲೇಜಿನಲ್ಲಿ ನಡೆದಿದ್ದು, ಈ ವೇಳೆ ಇವರ ಆಯ್ಕೆ ನಡೆದಿದೆ. ವಿಶ್ವನಾಥ ಬೈಲಮೂಲೆ ಅವರು ಕರ್ನಾಟಕ ರಾಜ್ಯ ಸರಕಾರಿ ಕುಂಬಾರ ಸರಕಾರಿ ನೌಕರರ ಕಲ್ಯಾಣ ಸಂಘ ದ.ಕ ಜಿಲ್ಲಾ ಯುನಿಟ್’ನ ಕಾರ್ಯದರ್ಶಿಯೂ ಆಗಿದ್ದಾರೆ.
ಎನ್’ಪಿಎಸ್ ನೌಕರರ ಸಂಘದ ಉಪಾಧ್ಯಕ್ಷರಾಗಿ ವಿಶ್ವನಾಥ ಬೈಲಮೂಲೆ ಆಯ್ಕೆ
Kulal news
1 Min Read