ಮೂಡುಬಿದರೆ: ಅಪಘಾತದಿಂದ ಮೃತಪಟ್ಟ ಪುತ್ತಿಗೆ ಪದವು ಆಟೋ ಚಾಲಕ ನಾರಾಯಣ ಕುಲಾಲ್ ಅವರ ಕುಟುಂಬಕ್ಕೆ ಆಟೋ ಚಾಲಕ-ಮಾಲಕ ಸಂಘದಿಂದ ಸಹಾಯಧನ ಇತ್ತೀಚೆಗೆ ಹಸ್ತಾಂತರಿಸಲಾಯಿತು.
ಮೂಡುಬಿದರೆ ಆಟೋ ಮಾಲಕ-ಚಾಲಕ ಸಂಘದ ಸಮಾಜಮಂದಿರ ಆಟೋಪಾರ್ಕ್ ಕ್ಷೇಮಾ ನಿಧಿಯೋಜನೆಯಿಂದ ನಾರಾಯಣ ಕುಲಾಲ್ ಅವರ ಪತ್ನಿಗೆ 50 ಸಾವಿರ ರೂ.ಗಳ ಬಾಂಡ್ ಹಾಗೂ ಮೂರು ಸಾವಿರ ನಗದನ್ನು ಸಂಘದ ಅಧ್ಯಕ್ಷ ಭಾಸ್ಕರ ಆಚಾರ್ಯ ಹಸ್ತಾಂತರಿಸಿದರು. ಈ ಸಂದರ್ಭ ಕ್ಷೇಮ ನಿಧಿ ಯೋಜನೆಯ 1 ಲಕ್ಷ ರೂ. ಇನ್ಶೂರೆನ್ಸ್ ಕೂಡ ದಿ.ನಾರಾಯಣ ಅವರ ಕುಟುಂಬಕ್ಕೆ ಸಿಗಲಿದೆ ಎಂದರು.
ಸಂಘದ ಪದಾಧಿಕಾರಗಳಾದ ರಾಮಚಂದ್ರ ಭಟ್, ಪ್ರದೀಪ್ ರೈ, ಸುರೇಶ್ ಕೋಟ್ಯಾನ್, ಜಯರಾಮ್ ರಾವ್, ಸಂತೋಷ್ ಬಾಕ್ಯರ್ಕೋಡಿ, ರಾಜು ಶೆಟ್ಟಿ, ಸುಕುಮಾರ್, ಸಂತೋಷ್ ಶೆಟ್ಟಿ, ಭಾಸ್ಕರ ಕೋಟೆಬಾಗಿಲು, ಆನಂದ ಪೂಜಾರಿ, ಸುರೇಶ್ ಪೂಜಾರಿ ಉಪಸ್ಥಿತರಿದ್ದರು.
ತಿಂಗಳ ಹಿಂದೆ ಮೂಡಬಿದ್ರೆ ಬಸ್ಸು ನಿಲ್ದಾಣದ ಕಡೆಯಿಂದ ವಿದ್ಯಾಗಿರಿ ಕಡೆಗೆ ಬಾಡಿಗೆಗೆ ಹೋಗುತ್ತಿದ್ದ ಸಂದರ್ಭ ಗಾಂಧಿನಗರ ಬಳಿ ನಾರಾಯಣ ಕುಲಾಲ್ ಚಲಾಯಿಸುತ್ತಿದ್ದ ರಿಕ್ಷಾ ವಾಹನವೊಂದಕ್ಕೆ ಜಾಗ ಬಿಟ್ಟುಕೊಡುವ ಸಂದರ್ಭ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಪಲ್ಟಿ ಹೊಡೆದಿತ್ತು. ಗಂಭೀರ ಗಾಯಗೊಂಡ ನಾರಾಯಣ ಅವರು ಸಾವನ್ನಪ್ಪಿದ್ದರು.