ಮಂಗಳೂರು : ನಕಲಿ ವೈದ್ಯರ ನಿರ್ಮೂಲನ ಸಮಿತಿಗೆ ರಾಜ್ಯ ಅಧ್ಯಕ್ಷರನ್ನಾಗಿ ಡಾ. ಅಣ್ಣಯ್ಯ ಕುಲಾಲ್ ಉಳ್ತೂರು ಅವರನ್ನು ನೇಮಿಸಲಾಗಿದೆ. ಅವರಿಗೆ ಹೆಣ್ಣು ಶಿಶು ಉಳಿಸಿ ಆಂದೋಲನದ ಹಾಗೂ ಸದಸ್ಯತನ ಆಂದೋಲನದ ಜವಾಬ್ದಾರಿಯನ್ನು ಹೆಚ್ಚುವರಿಯಾಗಿ ನೀಡಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಘದ ರಾಜ್ಯ ಘಟಕ ತಿಳಿಸಿದೆ. ಅಣ್ಣಯ್ಯ ಕುಲಾಲ್ ಅವರು `ಕುಲಾಲ್ ವರ್ಲ್ಡ್ ಡಾಟ್ ಕಾಂ’ನ ಪ್ರಧಾನ ಸಂಪಾದಕರೂ ಕೂಡಾ ಆಗಿದ್ದಾರೆ.
ನಕಲಿ ವೈದ್ಯ ನಿರ್ಮೂಲನ ಸಮಿತಿ ರಾಜ್ಯಾಧ್ಯಕ್ಷರಾಗಿ ಡಾ. ಅಣ್ಣಯ್ಯ ಕುಲಾಲ್ ಆಯ್ಕೆ
Kulal news
1 Min Read