ಮಂಗಳೂರು(ಕುಲಾಲ್ ವರ್ಲ್ಡ್ ಡಾಟ್ ಕಾಮ್) : ನೂರು ವರ್ಷಗಳ ಸಂಭ್ರಮದಲ್ಲಿ ಇರುವ ಭಾರತೀಯ ವೈದ್ಯಕೀಯ ಸಂಘಟನೆ ವಿಶ್ವದಲ್ಲಿಯೇ ಅತಿ ದೊಡ್ಡ ಹಾಗು ಅತೀ ಪ್ರಭಾವಶಾಲಿ ಸರಕಾರೇತರ ಸಂಸ್ಥೆ. ಇದು ಭಾರತದ ಪ್ರತೀ ರಾಜ್ಯ, ಜಿಲ್ಲೆ ಹಾಗೂ ತಾಲೂಕು ಗಳಲ್ಲಿ ಶಾಖೆಗಳನ್ನ ಹೊಂದಿರುವುದಲ್ಲದೇ ವಿಶ್ವದ ಹಲವು ರಾಷ್ಟ್ರಗಳಲ್ಲಿ ತನ್ನ ಸುಮಾರು 2500 ರಷ್ಟು ಶಾಖೆಯನ್ನ ಹೊಂದಿದ್ದು, ಅದರ ಕರ್ನಾಟಕ ರಾಜ್ಯ ಶಾಖೆಗೆ ಇತ್ತೀಚಿಗೆ ನಡೆದ ಚುನಾವಣೆಯಲ್ಲಿ ರಾಜ್ಯ ಉಪಾಧ್ಯಕ್ಷರಾಗಿ ಮಂಗಳೂರು ಭಾರತೀಯ ಸಂಘದ ಮಾಜಿ ಅಧ್ಯಕ್ಷ ಡಾ ಎಂ ಅಣ್ಣಯ್ಯ ಕುಲಾಲ್ ಉಳ್ತೂರು ಅವಿರೋಧವಾಗಿ ಆಯ್ಕೆ ಆಗಿದ್ದಾರೆ.

