ಮಂಜೇಶ್ವರ(ಕುಲಾಲ ವರ್ಲ್ಡ್ ಡಾಟ್ ಕಾಮ್): ಕೋಡಿ ಬಂಗೇರ ಕುಟುಂಬಸ್ಥರ ಮೂಲಸ್ಥಾನ ಕೋಡಿ ಮೀಯಪದವು ಇಲ್ಲಿ ಇದೇ ಬರುವ ತಾರೀಕು 26.1.2025 ಆದಿತ್ಯವಾರದಿಂದ ತಾರೀಕು 29.1.2025 ಬುಧವಾರದ ವರೆಗೆ ಕುಲಾಲ ಬಂಗೇರ ಕುಟುಂಬಸ್ಥರ ಮೂಲಸ್ಥಾನ ಕೋಡಿಯಲ್ಲಿ ಮೂಲಸ್ಥಾನ ತಂತ್ರಿವರ್ಯರಾದ ವೇದಮೂರ್ತಿ ಶ್ರೀ ಬೋಳಂತಕೋಡಿ ರಾಮ್ ಭಟ್ ಅವರ ಮಾರ್ಗದರ್ಶನದಲ್ಲಿ ಮತ್ತು ರಕ್ತೇಶ್ವರಿ ದೈವದ ಶಂಬಟ್ರು ನಾಮ ಪುರಸ್ಕೃತ ಮನೆತನದ ಶ್ರೀ ಶಿವಪ್ರಸಾದ್ ಭಟ್ ಕೋಡಿ ಇವರ ಉಪಸ್ಥಿತಿಯಲ್ಲಿ ಕೋಡಿ ಕುಲಾಲ ಬಂಗೇರ ಕುಟುಂಬಸ್ಥರ ಮೂಲಸ್ಥಾನದ ದೈವಗಳ “ಧರ್ಮನೇಮೋತ್ಸವ” ವಿಧಿವತ್ತಾಗಿ ವಿಜ್ರಂಭಣೆಯಿಂದ ನಡೆಯಲಿದೆ.

ಧರ್ಮನೇಮೋತ್ಸವಕ್ಕೆ ಪೂರ್ವಭಾವಿಯಾಗಿ ತಾರೀಕು 19.1.2025 ಆದಿತ್ಯವಾರದಂದು ಕುಟುಂಬದ ಹಿರಿಯರ ಮತ್ತು ಶ್ರೀ ಶಿವಪ್ರಸಾದ್ ಭಟ್ ಕೋಡಿ ಇವರ ಉಪಸ್ಥಿತಿಯಲ್ಲಿ ಗೊನೆ ಮುಹೂರ್ತ ನೆರವೇರಿತು. ಅದೇ ದಿನ ಸಂಜೆ 4 ಘಂಟೆಗೆ ತುಳುನಾಡಿನ ಸಂಪ್ರದಾಯದಂತೆ ದೈವಗಳ ನೇಮೋತ್ಸವದ ಪ್ರಯುಕ್ತ “ಕೋಳಿಗುಂಟ” ಶಾಸ್ತ್ರೋತ್ತವಾಗಿ ನೆರವೇರಿತು.

ತಾರೀಕು 26.1.2025 ಆದಿತ್ಯವಾರ ಬೆಳಗ್ಗೆ 8.30ಕ್ಕೆ ಗಣಪತಿ ಹೋಮ 9.30ಕ್ಕೆ ನಾಗತಂಬಿಲ 10.30ಕ್ಕೆ “ಆಶ್ಲೇಶಬಲಿ ಮತ್ತು ದುರ್ಗಾಪೂಜೆ” , ದೈವಗಳಿಗೆ ತಂಬಿಲ12. 30ಕ್ಕೆ ಮಹಾಪೂಜೆ ಪ್ರಸಾದ ವಿತರಣೆ 1ಘಂಟೆಗೆ “ಅನ್ನ ಸಂತರ್ಪಣೆ” 3 ಘಂಟೆಗೆ ಚಪ್ಪರ ಏರುವುದು 5ಕ್ಕೆ ಕೋಡಿ ರಕ್ತೇಶ್ವರಿ ಸನ್ನಿದಿಯಿಂದ ದೈವದ ಭಂಡಾರ ಹೊರಡುವುದು 6ಕ್ಕೆ ಭಂಡಾರ ಏರುವುದು, ತಂಬಿಲ ರಾತ್ರಿ 8.30ಕ್ಕೆ ಅನ್ನ ಸಂತರ್ಪಣೆ
ರಾತ್ರಿ 9ರಿಂದ “ರಕ್ತೇಶ್ವರಿ ದೈವದ ನೇಮೋತ್ಸವ”

ತಾರೀಕು 27.1.2025 ಸೋಮವಾರ ಬೆಳಿಗ್ಗೆ 10.30ಕ್ಕೆ ದೈವಗಳ ಭಂಡಾರ ಏರುವುದು, ತಂಬಿಲ 11ರಿಂದ ಅರಸು “ಮುಡಿಪ್ಪಿನಾರ್ ದೈವದ ನೇಮೋತ್ಸವ” 1.30ಕ್ಕೆ “ಅನ್ನ ಸಂತರ್ಪಣೆ” 4ರಿಂದ “ಧರ್ಮ ದೈವ ಮಲರಾಯ ದೈವದ ಮತ್ತು ಭಂಟ ದೈವದ ನೇಮೋತ್ಸವ” ರಾತ್ರಿ 7.30ರಿಂದ ಅನ್ನಸಂತರ್ಪಣೆ 8 ರಿಂದ “ಪಿಲಿಚಾಮುಂಡಿ ದೈವದ ನೇಮೋತ್ಸವ” 11ರಿಂದ “ಮಲಾರ್ದ ಪಂಜುರ್ಲಿ ದೈವದ ನೇಮೋತ್ಸವ”

ತಾರೀಕು 28.1.2025 ಮಂಗಳವಾರ. ಸಂಜೆ 4 ಘಂಟೆಗೆ ದೈವಗಳ ಭಂಡಾರ ಏರುವುದು ತಂಬಿಲ 5 ರಿಂದ ವರ್ಣಾರ ಪಂಜುರ್ಲಿ ದೈವದ ನೇಮೋತ್ಸವ 7.30ರಿಂದ ಅನ್ನ ಸಂತರ್ಪಣೆ ರಾತ್ರಿ8ರಿಂದ ಬಂಧು ಕಲ್ಲುರ್ಟಿ ದೈವದ ಕೋಲ 10 ರಿಂದ ಕೊರತಿ ದೈವದ ಕೋಲ 12ರಿಂದ ಮುಕಾಂಬಿ ಗುಳಿಗ ದೈವದ ಕೋಲ
ತಾರೀಕು 29.1.2025 ಬುಧವಾರ ಸಂಜೆ 6ರಿಂದ ಕುಪ್ಪೆ ಪಂಜುರ್ಲಿ ಮತ್ತು ಕುಟುಂಬದ ಕಲ್ಲುರ್ಟಿ ದೈವದ ಕೋಲ7. 30ರಿಂದ ಅನ್ನ ಸಂತರ್ಪಣೆ ರಾತ್ರಿ 11ರಿಂದ ರಾಹುಗುಳಿಗ ದೈವದ ಕೋಲ
ತಾರೀಕು 30.1.2025 ಗುರುವಾರ ರಾತ್ರಿ ಪಿರಿ ತಂಬಿಲದೊಂದಿ ಧರ್ಮನೇಮೋತ್ಸವ ಸಮಾಪ್ತಿಗೊಳ್ಳಲಿದೆ.
