ಮಂಗಳೂರು(ಕುಲಾಲ್ ವರ್ಲ್ಡ್ ಡಾಟ್ ಕಾಮ್): ಕುಟುಂಬಕ್ಕೆ ಆಧಾರವಾಗಿದ್ದು ಕಿಡ್ನಿ ಸಮಸ್ಯೆ ಮತ್ತು ಗ್ಯಾಂಗ್ರೀನ್ ನಿಂದ ಒಂದು ಕಾಲನ್ನು ಕಳೆದುಕೊಂಡಿರುವ ಮಂಗಳೂರಿನ ಸುರತ್ಕಲ್ ಮಧ್ಯ ನಿವಾಸಿ ಸಂಜೀವ ಮೂಲ್ಯ ಅವರ ಕುಟುಂಬಕ್ಕೆ ವಿವಿಧ ಸಂಘಟನೆಗಳ ನೆರವಿನೊಂದಿಗೆ ಒಟ್ಟು 86 ಸಾವಿರ ರೂಪಾಯಿ ಸಂಗ್ರಹಗೊಂಡಿದೆ. ಈ ಮೂಲಕ ತೀವ್ರ ಬಡತನದಲ್ಲಿದ್ದು, ಆರ್ಥಿಕ ಸಮಸ್ಯೆಯಿಂದ ಕಂಗೆಟ್ಟಿದ್ದ ಕುಟುಂಬ `ಕುಲಾಲ್ ವರ್ಲ್ಡ್ ಡಾಟ್ ಕಾಮ್’ ವರದಿಯಿಂದ ಕೊಂಚ ನಿರಾಳವಾಗಿದೆ.
ಸುರತ್ಕಲ್ ಮಧ್ಯ ಪ್ರಗತಿನಗರದ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿರುವ ಮಕ್ಕಳಿಲ್ಲದ ದಂಪತಿ ಸಂಜೀವ ಮೂಲ್ಯ – ಶೋಭಾಅವರ ಶೋಚನೀಯ ಬದುಕಿನ ಕುರಿತು `ಕುಲಾಲ್ ವರ್ಲ್ಡ್ ಡಾಟ್ ಕಾಮ್’ ವರದಿ ಪ್ರಕಟಿಸಿ ಹಣಕಾಸಿನ ನೆರವು ನೀಡುವಂತೆ ವಿನಂತಿಸಿಕೊಂಡಿತ್ತು. ಇದಕ್ಕೆ ಪ್ರತಿಸ್ಪಂದನೆ ನೀಡಿರುವ ಸೇವ್ ಲೈಫ್ ಚಾರಿಟೇಬಲ್ ಟ್ರಸ್ಟ್ 36,000 ರೂ., ಆಸರೆ ಗೆಳೆಯರ ಬಳಗ 30,000 ರೂ., ಹಾಗೂ ಮಂಗಳೂರು ಅಸೋಸಿಯೇಶನ್ ಸೌದಿ ಅರೇಬಿಯಾ (MASA) ಸಂಘಟನೆಯು 20,000 ರೂಪಾಯಿ ನೆರವು ನೀಡಿದೆ. ಇವರಿಗೆ ನೆರವು ಸಂಗ್ರಹಿಸುವಲ್ಲಿ ಕುಲಾಲ್ ವರ್ಲ್ಡ್ ವಾಟ್ಸಾಪ್ ಬಳಗದ ನಿರ್ವಾಹಕ ಹೇಮಂತ್ ಕುಮಾರ್ ಕಿನ್ನಿಗೋಳಿ ಅವರು ಮುತುವರ್ಜಿ ವಹಿಸಿದ್ದರು. ಮಾನವೀಯ ನೆರವು ನೀಡಿದ ಎಲ್ಲ ಮಹನೀಯರಿಗೂ ಸಂಜೀವ ಮೂಲ್ಯ ಕುಟುಂಬ ಕೃತಜ್ಞತೆ ಸಲ್ಲಿಸಿದೆ.