ಮಂಗಳೂರು(ಕುಲಾಲ್ ವರ್ಲ್ಡ್ ಡಾಟ್ ಕಾಮ್): ದ. ಕ ಜಿಲ್ಲಾ ಕುಲಾಲ ಮಾತೃಸಂಘದ ಮಾಜಿ ಅಧ್ಯಕ್ಷ, ಪ್ರಸಿದ್ಧ ಶೀಕೃಷ್ಣ ನಶ್ಯ ಇದರ ಪಾಲುದಾರರಾದ ಪಿ ಸದಾನಂದ ಅತ್ತಾವರ ಅಲ್ಪಕಾಲದ ಅನಾರೋಗ್ಯದಿಂದ ಮೇ ೨೨ರಂದು ನಿಧನರಾದರು.
ಕಾನೂನು ಪದವೀಧರರಾದ ಸಂದಾನಂದ ಅವರು ತಮ್ಮ ವಿದ್ಯಾಭ್ಯಾಸದ ಬಳಿಕ ತಂದೆ ದಿ. ಪಿ ನಾರ್ಣಪ್ಪ ಅವರು ಸ್ಥಾಪಿಸಿರುವ ಕೃಷ್ಣ ಸ್ನಫ್ ವರ್ಕ್ ಇದರ ಪಾಲುದಾರರಾಗಿ ವ್ಯವಹಾರವನ್ನು ನಡೆಸಿಕೊಂಡು ಬಂದಿರುತ್ತಾರೆ. ದಕ ಜಿಲ್ಲಾ ಕುಲಾಲ ಮಾತೃಸಂಘದ ಮಾಜಿ ಅಧ್ಯಕ್ಷರಾಗಿ ಸಮಾಜದ ಏಳಿಗೆಗಾಗಿ ದುಡಿದಿರುವ ಇವರು ಧಾರ್ಮಿಕ ಚಟುವಟಿಕೆಯಲ್ಲೂ ತೊಡಗಿಸಿಕೊಂಡು ಶ್ರೀದೇವಿ ದೇವಸ್ಥಾನದ ಆಡಳಿತ ಮಂಡಳಿಯಲ್ಲಿ ಕಾರ್ಯನಿರ್ವಹಿಸಿದ್ದಾರೆ. ಮೃತರು ಆರು ತಿಂಗಳ ಹಿಂದೆ ಪತ್ನಿಯನ್ನು ಕಳೆದುಕೊಂಡಿದ್ದು, ಓರ್ವ ಪುತ್ರ, ಸೊಸೆ ಮತ್ತು ಅಪಾರ ಬಂಧು ಬಳಗವನ್ನು ಬಿಟ್ಟು ಅಗಲಿದ್ದಾರೆ.