ಕುಂದಾಪುರ(ಕುಲಾಲ್ ವರ್ಲ್ಡ್ ಡಾಟ್ ಕಾಮ್): ಎರಡು ಮಕ್ಕಳ ತಾಯಿ , ಮಕ್ಕಳ ಬಾಳಲ್ಲಿ ಬೆಳಕು ತರಬೇಕಾದ ಸಮಯದಲ್ಲಿ ಕ್ಯಾನ್ಸರ್ ಎನ್ನುವ ದೊಡ್ಡ ಮಹಾಮಾರಿ ವಕ್ಕರಿಸಿದೆ. ಚಿಕಿತ್ಸೆಗೆ ಹಣವಿಲ್ಲದೇ ಪರದಾಡುತ್ತಿರುವ ಇವರ ಕತೆ ಕೇಳಿದರೆ ಕಣ್ಣಲ್ಲಿ ನೀರು ಬರದಿರಲು ಸಾಧ್ಯವೇ ಇಲ್ಲ. ಬೈಂದೂರು ತಾಲೂಕಿನ ಮೆಟ್ಟಿನ ಹೊಳೆ ಗ್ರಾಮದ ಹರವಾರಿ ವ್ಯಾಪ್ತಿಯ ದಿನ ಕೂಲಿ ಕಾರ್ಮಿಕರಾದ ಚಂದ್ರ ಕುಲಾಲರ ಪತ್ನಿ, ಹೆರಿಯಕ್ಕ ಕುಲಾಲರು ಮೊದಲೇ ಬಡತನದ ಬೇಗೆಯಲ್ಲಿ ಬೆಂದವರು. ಕೂಲಿ ನಾಲಿ ಮಾಡಿ ಬದುಕುತ್ತಿದ್ದ ಇವರಿಗೆ ಕ್ಯಾನ್ಸರ್ ಇದೆ ಎಂಬ ವಿಷಯ ಗೊತ್ತಾಗಿದ್ದೆ ಜರ್ಜರಿತರಾಗಿ ಹೋಗಿದ್ದಾರೆ. ಕ್ಯಾನ್ಸರ್ ಚಿಕಿತ್ಸೆಗೆ ಮಂಗಳೂರಿನ ಎಂ ಐ ಓ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿ, ಅಪರೇಷನ್ ನಡೆಸಿದ ನಂತರ. ಸ್ವಾಶಕೋಶ ತೊಂದರೆ ಆಗಿದೆ ಎಂದು ವೈಧ್ಯರು ಹೇಳಿದ್ದಾರೆ. ಆಸ್ಪತ್ರೆಯಲ್ಲಿ ಇದುವರೆಗೆ ಸುಮಾರು 5ಲಕ್ಷದ 60 ಸಾವಿರ ರೂ. ಖರ್ಚು ವೆಚ್ಚಗಳಾಗಿದೆ. ಈ ಬಾಳಿ ಬದುಕ ಬೇಕಿರುವ ಈ ಮಹಿಳೆಯನ್ನು ಉಳಿಸಿಕೊಳ್ಳಲು, ಇವರ ಕುಟುಂಬ ಹೋರಾಡುತ್ತಿದ್ದು, ಈ ಸರ್ಜರಿಗೆ ಅಗತ್ಯ ವಿರುವ ಸುಮಾರು 5 ಲಕ್ಷ ಕ್ಕೂ ಹೆಚ್ಚು ಚಿಕಿತ್ಸೆ ವೆಚ್ಚ ಆಗುತ್ತದೆ, ಬಡ ತಂದೆಯಿಂದ ಚಿಕಿತ್ಸೆಗೆ ಬೇಕಾದ ಈ ಮೊತ್ತವನ್ನು ಭರಿಸಲು ಸಾಧ್ಯವಿಲ್ಲ. ಬಡ ಮಹಿಳೆಯ ಜೀವ ಉಳಿಸಲು ಸಾಧ್ಯವಿರುವುದು ದಾನಿಗಳಿಂದ ಮಾತ್ರ. ನೀವು ನೀಡುವ ಹಣ ಸಾಮಾಜಿಕ ಬದಲಾವಣೆಗೆ ನಾಂದಿಯಾಗಬಹುದು. ಬಾಲಕನ ನೆರವಿಗೆ ಧಾವಿಸಲು ಆನ್ ಲೈನ್ ಅಭಿಯಾನವನ್ನು ಆರಂಭ ಮಾಡಲಾಗಿದೆ. ದಯವಿಟ್ಟು ನಿರ್ಮಲ ಮನಸ್ಸಿನಿಂದ ಕೆಳಗಿನ ಖಾತೆಗೆ ಕಿಂಚಿತ್ ಸಹಾಯ ನೀಡಿ ಸಹಕರಿಸಿರಿ.
Phonepe number
9008109889
google pay number
9008109889
ಅಕೌಂಟ್ ನಂಬರ್ :
0204104000278676
IFSC : IBKL0000204
Bank name : IDBI BANK
Branch : Kundapura
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಲು :
ಶ್ರೀಚಂದ್ರ ಕುಲಾಲ್ -+91 97410 23723