ಮಂಗಳೂರು(ಕುಲಾಲ್ ವರ್ಲ್ಡ್ ಡಾಟ್ ಕಾಮ್): ರಾಜೀವ್ಗಾಂಧಿ ಆರೋಗ್ಯ ವಿಶ್ವವಿದ್ಯಾನಿಲಯ ನಡೆಸಿದ ದಂತ ವೈದ್ಯಕೀಯ ಪದವಿ ಪರೀಕ್ಷೆಯಲ್ಲಿ ಸುರತ್ಕಲ್ ಮುಕ್ಕ ಶ್ರೀನಿವಾಸ ದಂತ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿನಿ ಕೃತಿಶ್ರೀ ಕುಲಾಲ್ 8ನೇ ರ್ಯಾಂಕ್ ಪಡೆದುಕೊಂಡಿದ್ದಾರೆ. ಅವರು ಎರಡನೇ ವರ್ಷ ಬಿಡಿಎಸ್ ನಲ್ಲಿ 5ನೇ ರ್ಯಾಂಕ್, ನಾಲ್ಕನೇ ವರ್ಷ 4ನೇ ರ್ಯಾಂಕ್ ಮತ್ತು 3 ಚಿನ್ನದ ಪದಕ ಗಳಿಸಿದ್ದಾರೆ.
ಫಾರ್ಮಕಾಲಜಿ ಮತ್ತು ಓರಲ್ ಮೆಡಿಸಿನ್ ನಲ್ಲಿ ಎರಡನೇ ರ್ಯಾಂಕ್ , ಅನಾಟಮಿ ಮತ್ತು ಪೆಥಾಲಜಿಯಲ್ಲಿ ನಾಲ್ಕನೇ ರ್ಯಾಂಕ್, ಆರ್ಥೋಡಾಂಟಿಕ್ಸ್ ಮತ್ತು ಪೆರಿಯೋಡಾಂಟಿಕ್ಸ್ ನಲ್ಲಿ ಆರನೇ, ಡೆಂಟಲ್ ಮೆಟೀರಿಯಲ್ಸ್ ಮತ್ತು ಪಬ್ಲಿಕ್ ಹೆಲ್ತ್ ದೆಂಟಿಸ್ಟ್ರಿಯಲ್ಲಿ ಒಂಭತ್ತನೇ, ಪಿಡೋಡಾಂಟಿಕ್ಸ್ ನಲ್ಲಿ ಐದನೇ ರ್ಯಾಂಕ್ ಸೇರಿ ಒಟ್ಟು 13 ರ್ಯಾಂಕ್ ಗಳ ಸಾಧನೆ ಮಾಡಿದ್ದಾರೆ. ಕೃತಿಶ್ರೀ ಕುಲಾಲ್ ಅವರು ತಲಪಾಡಿ ಕೆ.ಸಿ. ರೋಡ್ ನಿವಾಸಿ ಚಂದ್ರಹಾಸ ಕುಲಾಲ್ ಮತ್ತು ಭಾಗೀರಥಿ ದಂಪತಿಯ ಸುಪುತ್ರಿ.