ಕಾರ್ಕಳ(ಕುಲಾಲ್ ವರ್ಲ್ಡ್ ಡಾಟ್ ಕಾಮ್): ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನ ಸಮಿತಿಯು ವಿವಿಧ ಸಂಸ್ಥೆಗಳ ಸಹಯೋಗದೊಂದಿಗೆ ನೀಡುವ ಮಕ್ಕಳ ಕರ್ನಾಟಕ ರಾಜ್ಯೋತ್ಸವ ಗೌರವ -2021ಕ್ಕೆ ವಿವಿಧ ಜಿಲ್ಲೆಗಳ, ಹೊರನಾಡು ಮುಂಬಯಿ, ಕಾಸರಗೋಡು ಜಿಲ್ಲೆಗಳಿಗೆ ಸೇರಿದ ಒಟ್ಟು 30 ಮಂದಿಯನ್ನು ಆಯ್ಕೆ ಮಾಡಲಾಗಿದ್ದು, ಇವರಲ್ಲಿ ಕುಲಾಲ ಸಮಾಜದ ಮಕ್ಕಳಾದ ಮುಂಬಯಿಯ ಐಶ್ವರ್ಯಾ ಮೂಲ್ಯ ಹಾಗೂ ಮೂಡಬಿದ್ರೆಯ ಸನ್ವಿತ್ ಕುಲಾಲ್ ಆಯ್ಕೆಯಾಗಿದ್ದಾರೆ. ರಾಜ್ಯ ಮಟ್ಟದ ಈ ಗೌರವವನ್ನು ಧರ್ಮ ದರ್ಶಿ ಹರಿಕೃಷ್ಣ ಪುನರೂರು ನ.14ರಂದು ಮಧ್ಯಾಹ್ನ 2 ಗಂಟೆಗೆ ಅಜೆಕಾರಿನಲ್ಲಿ ಪ್ರದಾನ ಮಾಡಲಿರುವರು ಎಂದು ಮಕ್ಕಳ ವಿಭಾಗದ ಸುನಿಧಿ ಅಜೆಕಾರು ತಿಳಿಸಿದ್ದಾರೆ. ವಿಶೇಷಚೇತನ ಪ್ರತಿಭೆಯಾಗಿರುವ ಐಶ್ವರ್ಯಾ ಮೂಲ್ಯ ಅವರು ಮುಂಬಯಿಯ ವಾಸುದೇವ ಮೂಲ್ಯ-ಸ್ಮಿತಾ ದಂಪತಿಯ ಸುಪುತ್ರಿಯಾಗಿದ್ದಾರೆ. ಬಹುಮುಖ ಪ್ರತಿಭೆಯಾಗಿರುವ ಸನ್ವಿತ್ ಕುಲಾಲ್ ಅವರು ಮೂಡಬಿದ್ರೆ ಮಾರ್ಪಾಡಿ ಗ್ರಾಮದ ಕೋಟೆ ಬಾಗಿಲಿನ ಸತೀಶ್ ಕುಲಾಲ್ ಮತ್ತು ಪವಿತ್ರ ದಂಪತಿಯ ಪುತ್ರ.
ಐಶ್ವರ್ಯಾ ಮೂಲ್ಯ ಹಾಗೂ ಸನ್ವಿತ್ ಕುಲಾಲ್ ‘ಮಕ್ಕಳ ಕರ್ನಾಟಕ ರಾಜ್ಯೋತ್ಸವ’ ಗೌರವಕ್ಕೆ ಆಯ್ಕೆ
Banner
1 Min Read