ಪುತ್ತೂರು(ಕುಲಾಲ್ ವರ್ಲ್ಡ್ ಡಾಟ್ ಕಾಮ್) : ಪುತ್ತೂರು ಕುಲಾಲ ಸಮಾಜ ಸೇವಾ ಸಂಘ ಇದರ ನೂತನ ಸಾಲಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ. ಅಧ್ಯಕ್ಷರಾಗಿ ನ್ಯಾಯವಾದಿ ಮಹೇಶ್ ಕೆ.ಸವಣೂರು, ಪ್ರಧಾನ ಕಾರ್ಯದರ್ಶಿಯಾಗಿ ಜನಾರ್ಧನ ಮೂಲ್ಯ ಸಾರ್ಯ, ಗೌರವಾಧ್ಯಕ್ಷರಾಗಿ ಬಿ.ಎಸ್.ಕುಲಾಲ್, ಉಪಾಧ್ಯಕ್ಷರಾಗಿ ನವೀನ್ ಕುಲಾಲ್, ಜತೆ ಕಾರ್ಯದರ್ಶಿಯಾಗಿ ಕೃಷ್ಣಪ್ಪ ಮಚ್ಚಿಮಲೆ, ಕೋಶಾಧಿಕಾರಿಯಾಗಿ ತುಕರಾಮ ಮುದಲಾಜೆ, ಕ್ರೀಡಾ ಕಾರ್ಯದರ್ಶಿಯಾಗಿ ಆನಂದ ಪಡೀಲು, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಸುಧಾಕರ ನಡುವಾಳ್, ಸಂಘಟನಾ ಕಾರ್ಯದರ್ಶಿಯಾಗಿ ಜಯಾನಂದ ಸಿ.ಎಚ್ ಆವರನ್ನು ಆಯ್ಕೆ ಮಾಡಲಾಯಿತು.
ಕಾರ್ಯಕಾರಿ ಸಮಿತಿ ಸದಸ್ಯರಾಗಿ ಕೃಷ್ಣಪ್ಪ ಕೆ,ದಿನೇಶ್ ಪಿ.ವಿ, ಧರ್ಣಪ್ಪ ಮೂಲ್ಯ ಕಜೆ, ವಸಂತ ಕಾರೆಕಾಡು, ವಸಂತ ಕುಲಾಲ್ ಅಕಾ, ಚಂದ್ರಶೇಖರ ಕೆ, ಜನಾರ್ಧನ ಸಿಟಿಗುಡ್ಡೆ, ಭಾಸ್ಕರ ಎಂ.ಪೆರುವಾಯಿ, ದಿವಾಕರ ಆಲಂಕಾರು, ಗಣೇಶ್ ಕುಲಾಲ್ ಬಜತ್ತೂರು, ಸತೀಶ್ ಕುಲಾಲ್ ಉಡ್ಡಂಗಲ, ಬಾಲಕೃಷ್ಣ ಕುಲಾಲ್ ಕೌಡಿಚ್ಚಾರು ಆವರನ್ನು ಆಯ್ಕೆ ಮಾಡಲಾಗಿದೆ.