ಮಂಗಳೂರು(ಕುಲಾಲ್ ವರ್ಲ್ಡ್ ಡಾಟ್ ಕಾಮ್): ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಹಾಗೂ ಜೈ ತುಳುನಾಡ್ (ರಿ) ಸಂಘಟನೆಯ ಆಶ್ರಯದಲ್ಲಿ ನಡೆದ ತುಳು ಲಿಪಿ ಪರೀಕ್ಷೆಯಲ್ಲಿ ರಿಶಿಕ್ ಡಿ. ಪದ್ಮುಂಜ ಅವರು 98 ಅಂಕ ಪಡೆದು ದ್ವಿತೀಯ ಬಹುಮಾನ ಪಡೆದಿದ್ದಾರೆ
ಈ ಮೂಲಕ ಐದನೇ ವಯಸ್ಸಿನಲ್ಲಿ ತುಳು ಲಿಪಿ ಪರೀಕ್ಷೆ ಬರೆದು ಬಹುಮಾನ ಪಡೆದ ಮೊದಲ ಕಿರಿಯ ವಿದ್ಯಾರ್ಥಿ ಎಂಬ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಇವರಿಗೆ ತುಳು ಲಿಪಿ ಶಿಕ್ಷಕರಾದ ಕಿರಣ್ ತುಳುವೆ, ಗೀತಾ ಶೆಟ್ಟಿ, ಶ್ವೇತಾ ಶೆಟ್ಟಿ ಅವರು ತರಬೇತಿ ನೀಡಿದ್ದರು. ರಿಷಿಕ್ ಅವರು ಬೆಳ್ತಂಗಡಿ ತಾಲೂಕಿನ ಮಲೆಂಗಲ್ಲು ನಿವಾಸಿ ಕೀರ್ತನಾ ಕುಲಾಲ್ ಮತ್ತು ದಿವಾಕರ್ ಪದ್ಮುಂಜ ಅವರ ಸುಪುತ್ರ. ತುಳು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ದಯಾನಂದ ಕತ್ತಲ್ ಸಾರ್ ಅವರು ಬಹುಮಾನ ವಿತರಿಸಿದರು.