ಮುಂಬಯಿ(ಕುಲಾಲ್ ವರ್ಲ್ಡ್ ಡಾಟ್ ಕಾಮ್): ರಕ್ತದ ಕ್ಯಾನ್ಸರ್ ನಿಂದ ಬಳಲುತ್ತಿರುವ ಪುಣೆಯ ಸಂಧ್ಯಾ ಮೂಲ್ಯ-ಚಂದ್ರಕಾಂತ್ ದಂಪತಿಯ ಪುತ್ರ ಶ್ರೇಯಸ್ ಅವರ ಚಿಕಿತ್ಸೆಗೆ ಮುಂಬಯಿ ಕುಲಾಲ ಸಂಘದ ವತಿಯಿಂದ 1,15,001/- ರೂಪಾಯಿ ಧನ ಸಹಾಯ ನೀಡಲಾಯಿತು.
ಮುಂಬಯಿ ಕುಲಾಲ ಸಂಘದ ಅಧ್ಯಕ್ಷ ದೇವದಾಸ್ ಕುಲಾಲ್, ಪದಾಧಿಕಾರಿಗಳಾದ ಗಿರೀಶ್ ಸಾಲ್ಯಾನ್, ಕರುಣಾಕರ ಸಾಲ್ಯಾನ್ , ಜಯ ಅಂಚನ್ , ಸುನಿಲ್ ಸಾಲ್ಯಾನ್, ಬಿನೀತ್ ಸಾಲ್ಯಾನ್ ಮೊದಲಾದವರು ಪುಣೆಯ ಅಪ್ಪುಮೂಲ್ಯ, ವಿಶ್ವನಾಥ್ ಅವರ ಸಮ್ಮುಖದಲ್ಲಿ ಚಂದ್ರಕಾಂತ್ ಅವರಿಗೆ ಚೆಕ್ ಹಸ್ತಾಂತರ ನಡೆಸಿದರು.
ಮುಂಬಯಿ ಕುಲಾಲ ಸಂಘದ ವತಿಯಿಂದ ಶ್ರೇಯಸ್ ಚಿಕಿತ್ಸೆಗೆ ಧನಸಹಾಯ
Kulal news
1 Min Read