ಪುಣೆ(ಕುಲಾಲ್ ವರ್ಲ್ಡ್ ಡಾಟ್ ಕಾಮ್): ಆತ ನೂರಾರು ಕನಸುಗಳನ್ನು ಹೊಂದಿದ್ದ ಹುಡುಗ. ಅಪ್ಪ ಅಮ್ಮನ ಹಿರಿಯ ಮಗನಾಗಿ ಬೆಳೆದು ಕಷ್ಟಪಟ್ಟು ವಿದ್ಯಾಭ್ಯಾಸ ಮಾಡಿ ಕಾಲೇಜಿಗೆ ಹೋಗುವ ಹೊತ್ತಿಗಾಗಲೇ ವಿಧಿ ಆತನ ಬಾಳಲ್ಲಿ ಕ್ರೂರ ಆಟ ಆಡಿದೆ. ರಕ್ತದ ಕ್ಯಾನ್ಸರ್ ಆತನ ಕನಸುಗಳನ್ನು ಕಿತ್ತು ತಿನ್ನುತ್ತಿದೆ. ಒಮ್ಮೆ ದೇವರೂ ಕ್ರೂರಿಯಾಗಿ ಕಾಣುತ್ತಾನೆ ಅಂತಾರಲ್ಲ..ಬಹುಶಃ ಈ ಹುಡುಗನ ಸ್ಥಿತಿ ನೋಡಿ ನಿಮಗೂ ಹಾಗೇಯೇ ಅನಿಸಬಹುದು. ಕುಟುಂಬಕ್ಕೆ ಆಧಾರಸ್ತಂಭವಾಗಿ ತಾಯಿಗೆ ನೆಮ್ಮದಿಯ ಜೀವನ ಕೊಡುವ ಮಗನಾಗಿ ಬದುಕಿ ಬಾಳಬೇಕಾಗಿದ್ದ ಈ ಯುವಕನ ಹೆಸರು ಶ್ರೇಯಸ್.
ಮೂಲತಃ ಮುಂಡ್ಕೂರು ಸಂಕಲಕರಿಯದವರಾದ ಪ್ರಸ್ತುತ ಹೊಟ್ಟೆಪಾಡಿಗಾಗಿ ಪುಣೆಯಲ್ಲಿ ವಾಸವಾಗಿರುವ ಸಂಧ್ಯಾ ಮೂಲ್ಯ-ಚಂದ್ರಕಾಂತ್ ದಂಪತಿಯ ಬಾಳಲ್ಲಿ ವಿಧಿ ತನ್ನ ಕ್ರೂರ ಲೀಲೆಯನ್ನು ತೋರಿಸಿದೆ. ಸಣ್ಣದೊಂದು ಪಾನ್ ಬೀಡಾ ಅಂಗಡಿ ಇಟ್ಟುಕೊಂಡು ತಮ್ಮಿಬ್ಬರು ಮಕ್ಕಳನ್ನು ಸಾಕಲು ಕಷ್ಟಪಡುತ್ತಿರುವ ದಂಪತಿಯ ಕಣ್ಣಲ್ಲಿ ಬರೀ ಕಣ್ಣೀರಲ್ಲದೆ ಏನೂ ಕಾಣುತ್ತಿಲ್ಲ. ತಮ್ಮ ಶ್ರಮಕ್ಕೆ ಸರಿಯಾಗಿ ಕಾಲೇಜಿಗೆ ಟಾಪ್ ಆಗಿ ಹೊರಹೊಮ್ಮುತ್ತಿದ್ದ ಶ್ರೇಯಸ್ ನ ಬಾಳಲ್ಲಿ ಈಗ ಕ್ಯಾನ್ಸರ್ ಎಂಬ ಮಹಾಮಾರಿ ಅಂಟಿಕೊಂಡಿದ್ದು ವೈದ್ಯಲೋಕ ಈತನ ಕಾಯಿಲೆಗೆ ಇಟ್ಟ ಹೆಸರು Acute myeloid leukemia. ಅದೃಷ್ಟವಶಾತ್ ಶ್ರೇಯಸ್ ನೋವಿಗೆ ವೈದ್ಯಲೋಕದಲ್ಲಿ ಪರಿಹಾರವಿದೆ ಎಂದು ವೈದ್ಯರು ತಿಳಿಸಿದ್ದಾರೆ. ಕೆಲವು ಅವಧಿಗೆ ಹಲವು ಕೀಮೋಥೆರಪಿಗಳು, ರಕ್ತ ವರ್ಗಾವಣೆ ಮತ್ತು ಪ್ಲಾಸ್ಮಾ ವರ್ಗಾವಣೆ ಮುಂತಾದ ಚಿಕಿತ್ಸೆಯಿಂದ ರೋಗ ಸಂಪೂರ್ಣ ಗುಣಪಡಿಸಬಹುದು ಎಂಬ ಭರವಸೆ ವೈದ್ಯರಿಂದ ದೊರೆತಿದೆ. ಆದರೆ ಈ ಚಿಕಿತ್ಸಾ ವೆಚ್ಚ ತುಂಬಾ ದುಬಾರಿಯಾಗಿದ್ದು, ಇದಕ್ಕಾಗಿ ಸುಮಾರು 15 ಲಕ್ಷ ರೂಪಾಯಿ ವೆಚ್ಚ ತಗಲಬಹುದು ಎಂದು ವೈದ್ಯರು ಅಂದಾಜಿಸಿದ್ದಾರೆ. ಸದ್ಯ ಪುಣೆಯ ಸಹ್ಯಾದ್ರಿ ಆಸ್ಪತ್ರೆಯಲ್ಲಿ ಶ್ರೇಯಸ್ ಚಿಕಿತ್ಸೆ ಪಡೆಯುತ್ತಿದ್ದು, ಮಗನನ್ನು ಉಳಿಸಲು ಸಾಲದ ಮೇಲೆ ಸಾಲ ಮಾಡಿ ಆಸ್ಪತ್ರೆಗೆ ಹಣ ತುಂಬುತ್ತಿದ್ದಾರೆ. ಆದರೆ ಮತ್ತಷ್ಟು ಹಣದ ಅವಶ್ಯಕತೆ ಇರೋದರಿಂದ ಹೆತ್ತವರು ಕಂಗಾಲಾಗಿದ್ದಾರೆ. ಅಧಿಕ ಹಣದ ಅವಶ್ಯಕತೆಯಿರುವುದರಿಂದ ದಾನಿಗಳ ಮೊರೆ ಹೋಗಿದ್ದಾರೆ. ಆತನನ್ನು ಬದುಕಿಸಲು ದಯವಿಟ್ಟು ನೆರವಾಗಿ, ಎಂದು ಶ್ರೇಯಸ್ ತಾಯಿ ಚಿಕಿತ್ಸೆಗೆ ಹಣವನ್ನು ಹೊಂದಿಸಲು ಕ್ರೌಡ್ ಸೋರ್ಸಿಂಗ್ ಕೆಟ್ಟೊ ಮೂಲಕ ಒಂದು ಅಭಿಯಾನವನ್ನು ಹಮ್ಮಿಕೊಂಡಿದ್ದಾರೆ. ಇದೀಗ ಈ ಬಡ ಕುಟುಂಬಕ್ಕೆ ನಿಮ್ಮಿಂದ ಮಾತ್ರ ಸಹಾಯ ಮಾಡಲು ಸಾಧ್ಯ, ಹಣ ಹೊಂದಿಸಲು ನೀವು ನೆರವಾಗಿ, ಇದರಿಂದ ಅವರ ಪೋಷಕರಿಗೆ ಮಗ ಜೀವಂತವಾಗಿ ಸಿಗುತ್ತಾನೆ.
ದಂಪತಿ ಜನರ ಮೇಲೆ ನಂಬಿಕೆ ಇಟ್ಟಿದ್ದಾರೆ, ನೀವು ಸಹಾಯ ಮಾಡುವುದರಿಂದ ಅವರ ಜೀವನದಲ್ಲಿ ಬದಲಾವಣೆ ತರಬಹುದು, ಮುಖದಲ್ಲಿ ನಗು ಮೂಡಿಸಬಹುದು, ದೇಣಿಗೆ ಸಂಗ್ರಹದಲ್ಲಿ ಸಹಾಯ ಮಾಡಿ. ಮಗನನ್ನು ಉಳಿಸಿಕೊಳ್ಳಲು ಕುಟುಂಬಕ್ಕೆ ನೆರವಾಗಿ. ನೀವು ಹೇಗೆ ಸಹಾಯ ಮಾಡಬಹುದು? ನೀವು ಇಲ್ಲಿ ದಾನ ಮಾಡಬಹುದು. ಅಸಾಧ್ಯವಾದರೆ ನೀವು ಶ್ರೇಯಸ್ ಸುದ್ದಿಯನ್ನು ಫೇಸ್ಬುಕ್ನಲ್ಲಿ ಹಾಗೂ ವಾಟ್ಸಾಪ್ನಲ್ಲಿ ಶೇರ್ ಮಾಡಬಹುದು, ಇದರಿಂದ ಅವರ ಸಮಸ್ಯೆ ಹೆಚ್ಚು ಜನರನ್ನು ತಲುಪಿ ಕುಟುಂಬಕ್ಕೆ ಸಹಾಯವಾಗುತ್ತದೆ.
ಬ್ಯಾಂಕ್ ಖಾತೆ ವಿವರ :
Sandhya Chandrakant Moolya
THE BHARAT CO-OPERATIVE BANK LTD
Branch: Dhanakawadi, Pune
IFSC code: BCBM0000032
Account: 003110100016838
——————–
ಕೆಟ್ಟೋ ಲಿಂಕ್ :
Read more at: https://kannada.oneindia.com/news/india/helpless-father-struggling-to-save-son-from-rare-blood-cancer-206540.html
https://www.ketto.org/fundraiser/saveshreyasm?utm_medium=whatsappShare&utm_content=2429253&shby=1&utm_source=external_Ketto&utm_campaign=saveshreyasm