ಮಂಗಳೂರು(ಜ., ಕುಲಾಲ್ ವರ್ಲ್ಡ್ ಡಾಟ್ ಕಾಮ್): ಕುಲಾಲ ಸಂಘದ ಆಡಳಿತದಲ್ಲಿರುವ ಕುಲಶೇಖರ ವೀರನಾರಾಯಣ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷರಾಗಿ ಪುರುಷೋತ್ತಮ ಕುಲಾಲ್ ಕಲ್ಬಾವಿ ಅವರು ಮರು ಆಯ್ಕೆಯಾಗಿದ್ದಾರೆ.
ದಕ್ಷಿಣಕನ್ನಡ ಜಿಲ್ಲಾ ಕುಲಾಲ ಮಾತೃಸಂಘದ ವಾರ್ಷಿಕ ಮಹಾಸಭೆಯಲ್ಲಿ ನೇಮಿಸಲ್ಪಟ್ಟ ಚುನಾವಣಾಧಿಕಾರಿಗಳ ಮೂಲಕ ಆ ಆಯ್ಕೆ ಘೋಷಣೆಯಾಗಿದ್ದು, ದೇವಸ್ಥಾನದ ಆಡಳಿತ ಮಂಡಳಿ ಕಾರ್ಯದರ್ಶಿಯಾಗಿ ನ್ಯಾಯವಾದಿ ರವೀಂದ್ರ ಮುನ್ನಿಪ್ಪಾಡಿ, ಕೋಶಾಧಿಕಾರಿಯಾಗಿ ಬಿ. ಮೋಹನ್ ದಾಸ್ ಅಳಪೆ, ಆಡಳಿತ ಮಂಡಳಿ ಸದಸ್ಯರಾಗಿ ಪುರುಷೋತ್ತಮ್ ಬಿಜೈ, ಶೀನ ಮೂಲ್ಯ ಹೊಯ್ಗೆಬೈಲು, ಶ್ರೀನಿವಾಸ್ ಕೆ ಜಯನಗರ, ಗಿರಿಧರ ಮೂಲ್ಯ ಬಿಜೈ, ದೂಮಪ್ಪ ಮೂಲ್ಯ ಮಂದಾರಬೈಲು ಮತ್ತು ಚಂದ್ರಹಾಸ ಕುಲಾಲ್ ಜಪ್ಪಿನಮೊಗರು ಆಯ್ಕೆಯಾಗಿದ್ದಾರೆ. ನೂತನ ಆಡಳಿತ ಮಂಡಳಿಯ ಪದಗ್ರಹಣ ಸಮಾರಂಭ ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರನ್ನು ಗುರುತಿಸಿ ಸನ್ಮಾನಿಸುವ ಭವ್ಯ ಸಮಾರಂಭವು ಜನವರಿ 31ರಂದು ಜರುಗಲಿದೆ.