ಮುಂಬಯಿ ಯಶೋದಾ ಬಿ ಸಾಲ್ಯಾನ್
(ಕುಲಾಲ್ ವರ್ಲ್ಡ್ ಡಾಟ್ ಕಾಮ್): ಮುಂಬಯಿಯ ದಿ. ಬಾಬು ಸಾಲ್ಯಾನ್ ಅವರ ಪತ್ನಿ ಯಶೋದಾ ಬಿ ಸಾಲ್ಯಾನ್ (82) ಸೆ. ೧೮ರಂದು ಮುಂಬಯಿ ದಾದರ್ ನ ಸ್ವಗ್ರಹದಲ್ಲಿ ನಿಧನರಾದರು. ಅವರು ಮುಂಬೈಯ ಕುಲಾಲ ಸಂಘದ ಮಾಜಿ ಅಧ್ಯಕ್ಷರು , ಮಂಗಳಾದೇವಿ ಕುಲಾಲ ಭವನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾದ ಗಿರೀಶ್ ಬಿ ಸಾಲ್ಯಾನ್ , ಡಾ. ಹರೀಶ್ ಬಿ ಸಾಲಿಯಾನ್ ಮತ್ತು ಸೊಸೆಯಂದಿರು ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.
ಉಳೆಪಾಡಿ ಗುಲಾಬಿ ಕುಲಾಲ್
(ಕುಲಾಲ್ ವರ್ಲ್ಡ್ ಡಾಟ್ ಕಾಮ್): ಮುಂಡ್ಕೂರು ಉಳೆಪಾಡಿ ಪಾನೆ ಹೌಸ್ ನ ನಿವಾಸಿ ಗುಲಾಬಿ ರಾಜು ಕುಲಾಲ್(78) ಅವರು ಇತ್ತೀಚೆಗೆ ನಿಧನರಾದರು. ಇವರು ಕುಲಶೇಖರ ಶ್ರೀ ವೀರನಾರಾಯಣ ದೇವಸ್ಥಾನದ ಸೇವಾ ಟ್ರಸ್ಟಿನ ಅಧ್ಯಕ್ಷ ಬಿ ಪ್ರೇಮಾನಂದ ಕುಲಾಲ್ ಅವರ ಅತ್ತೆಯಾಗಿದ್ದಾರೆ. ಮೃತರು 7 ಗಂಡು 2 ಹೆಣ್ಣು ಮಕ್ಕಳು ಹಾಗೂ ಅಪಾರ ಬಂಧುಗಳನ್ನು ಬಿಟ್ಟು ಅಗಲಿದ್ದಾರೆ.