ಬೆಳ್ತಂಗಡಿ(ಕುಲಾಲ್ ವರ್ಲ್ಡ್ ಡಾಟ್ ಕಾಮ್): ವೇಣೂರು ಸಮೀಪದ ಪಡಂಗಡಿ ಗ್ರಾಮದ ಬದ್ಯಾರು ಎಂಬಲ್ಲಿ ಲಾರಿ ಮತ್ತು ಸ್ಕೂಟರ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಸ್ಕೂಟರ್ ಚಾಲಕ ಸಾವನ್ನಪ್ಪಿದ ಘಟನೆ ಸೆ.13 ರಂದು ಮಧ್ಯಾಹ್ನ ನಡೆದಿದೆ.
ಅಳದಂಗಡಿ ಕಡೆಯಿಂದ ಬರುತ್ತಿದ್ಧ ಲಾರಿ ಮತ್ತು ವಿರುದ್ಧ ದಿಕ್ಕಿನಿಂದ ಬಂದ ಸ್ಕೂಟರ್ ನಡುವೆ ಅಪಫಾತ ನಡೆದಿದ್ದು, ಈ ಸಮಯ ಚಾಲಕ ಗಡಾ೯ಡಿ ಗ್ರಾಮದ ರನ್ನಡಿಪಲ್ಕೆ ನಿವಾಸಿ ಲಿಂಗಪ್ಪ ಮೂಲ್ಯ ಅವರ ಮಗ ಗಿರೀಶ್ ಮೂಲ್ಯ ರಸ್ತೆ ಗೆ ಬಿದ್ದು, ಅವರ ತಲೆ ಮೇಲೆಯೇ ಲಾರಿ ಚಲಿಸಿದ ಪರಿಣಾಮ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕೂಡಲೇ ಸ್ಥಳೀಯರು ಸೇರಿ ಆಂಬ್ಯುಲೆನ್ಸ್ ನಲ್ಲಿ ಬೆಳ್ತಂಗಡಿ ಆಸ್ಪತ್ರೆಗೆ ಸಾಗಿಸುವ ಯತ್ನ ಮಾಡಿದರು. ಗಿರೀಶ್ ಅವರು ಜೆಸಿಬಿ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದರು. ಬೆಳ್ತಂಗಡಿ ಪೊಲೀಸ್ ರು ಕೇಸು ದಾಖಲು ಮಾಡಿದ್ದಾರೆ. ಗಿರೀಶ್ ಅವರು ಹೆಲ್ಮೆಟ್ ಧರಿಸಿದ್ದರೂ ಲಾರಿ ಚಕ್ರ ತಲೆ ಮೇಲೆಯೇ ಚಲಿಸಿದ ಪರಿಣಾಮ ಹೆಲ್ಮೆಟ್ ಪುಡಿಪುಡಿಯಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.