ಕುಂದಾಪುರ(ಕುಲಾಲ್ ವರ್ಲ್ಡ್ ಡಾಟ್ ಕಾಮ್): ಉದರ ಸಂಬಂಧಿ ಕ್ಯಾನ್ಸರ್ ನಿಂದ ಬಳಲುತ್ತ ಚಿಕಿತ್ಸೆ ಪಡೆಯುತ್ತಿದ್ದ ವಕ್ವಾಡಿ ಸಂತೋಷ್ ಕುಲಾಲ್ ಚಿಕಿತ್ಸೆ ಫಲಕಾರಿಯಾಗದೇ ವಿಧಿವಶರಾಗಿದ್ದಾರೆ.
ಬಡತನದಲ್ಲಿ ಹುಟ್ಟಿ, ತನ್ನ ಕಠಿಣ ಪರಿಶ್ರಮದಿಂದ ವಕ್ವಾಡಿ ಮತ್ತು ಆಸುಪಾಸಿನ ಗ್ರಾಮಗಳಲ್ಲಿ ಸಂತೋಷ್ ಕುಲಾಲ್ ಪರಿಚಿತ ವ್ಯಕ್ತಿಯಾಗಿದ್ದರು. ಸುಮಾರು ಎರಡು ವರ್ಷದಿಂದ ಉದರ ಸಂಬಂಧಿ ಕ್ಯಾನ್ಸರ್ ನಿಂದ ನೋವು ಅನುಭವಿಸಿಕೊಂಡು , ತಾನೇ ತನ್ನ ಸಲುಹಿಕೊಂಡು ಕಾಯಿಲೆಗೆ ಸೆಡ್ಡು ಹೊಡೆದು ಬದುಕಿದ್ದರು. ಇಂದು ಚಿಕಿತ್ಸೆ ಫಲಿಸದೇ ಅವರ ಸ್ವಗ್ರಹದಲ್ಲಿ ನಿಧನರಾದರು.
ವಕ್ವಾಡಿಯ ಯುವ ಶಕ್ತಿ ಯುವಕ ಮಂಡಲ ಮತ್ತು ಕುಲಾಲ ಸಂಘಟನೆಗಳಲ್ಲಿ, ವಕ್ವಾಡಿಯ ಸಾರ್ವಜನಿಕ ಗಣೇಶೋತ್ಸವಗಳಲ್ಲಿ , ಸ್ಥಳೀಯವಾಗಿ ನಡೆಯುವ ಯಾವುದೇ ಕಾರ್ಯಕ್ರಮಗಳಲ್ಲಿ ಲವಲವಿಕೆಯಿಂದ ಪಾಲ್ಗೊಳ್ಳುತ್ತಿದ್ದ ಸಂತೋಷ್ ಕುಲಾಲ್ ಸಭೆ, ಸಮಾರಂಭಗಳ ನಿರ್ವಹಣೆಯಲ್ಲೂ ಮುಂಚೂಣಿಯಲ್ಲಿದ್ದರು. ಮಾತಿನ ಧಾಟಿಯಲ್ಲಿ ಎಲ್ಲರನ್ನೂ ಮೋಡಿ ಮಾಡುವ ಗುಣ ಅವರಲ್ಲಿತ್ತು.