ಮಂಗಳೂರು(ಕುಲಾಲ್ ವರ್ಲ್ಡ್ ಡಾಟ್ ಕಾಮ್) :ಮಾರಕ ಲಿವರ್ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿರುವ ಪಚ್ಚನಾಡಿ ಗ್ರಾಮದ ಸಂತೋಷ್ ನಗರ ನಿವಾಸಿ ದಿ. ದೇಜಪ್ಪ ಅವರ ಪತ್ನಿ ಗೋಪಿಕೃಷ್ಣ ಅವರಿಗೆ ಕುಲಾಲ ಯುವ ವೇದಿಕೆಯ ವತಿಯಿಂದ 27,100 ರೂಪಾಯಿ ಧನ ಸಹಾಯ ನೀಡಲಾಯಿತು.
ಜೂನ್ ೨ರಂದು ಅವರ ಮನೆಗೆ ತೆರಳಿದ ವೇದಿಕೆ ಸದಸ್ಯರು ಚೆಕ್ ನೀಡಿ ಸಾಂತ್ವನ ಹೇಳಿದರು. ಈ ಸಂದರ್ಭ ಕುಲಾಲ ಯುವ ವೇದಿಕೆ ಮಂಗಳೂರು ಇದರ ಅಧ್ಯಕ್ಷರಾದ ಅಕ್ಷಯ್ ಕುಲಾಲ್, ಮಾಜಿ ಅಧ್ಯಕ್ಷರಾದ ಪ್ರಶಾಂತ್ ಕುಲಾಲ್, ಶ್ರೀಮತಿ ಮಮತ ಅಣ್ಣಯ್ಯ ಕುಲಾಲ್, ಶ್ರೀಮತಿ ಬಬಿತಾ ರವೀಂದ್ರ, ದೀಪಕ್ ಕುಲಾಲ್, ಉದಯ ಕುಲಾಲ್ ಮೊದಲಾದವರು ಉಪಸ್ಥಿತರಿದ್ದರು.
ಗೋಪಿ ಅವರ ಪತಿ ತೀರಿಕೊಂಡಿದ್ದರೆ ಚಿಕಿತ್ಸೆಗೆ ಹಣವಿಲ್ಲದೆ, ಸದ್ಯ ಊಟಕ್ಕೂ ತತ್ವಾರ ಎದುರಾಗಿತ್ತು, ಅವರ ಮಗಳು ಚಂಚಲಾಕ್ಷಿ ಅವರು ಬೇರೆಯವರ ಮನೆಯಲ್ಲಿ ಅಡುಗೆ ಕೆಲಸ ಮಾಡಿಕೊಂಡು ಮನೆ ನಡೆಸಲು ಕಷ್ಟ ಪಡುತ್ತಿದ್ದು, ಆರ್ಥಿಕ ಸಹಾಯ ನೀಡುವಂತೆ ವಿನಂತಿಸಿಕೊಂಡಿದ್ದರು, ಈ ಕುರಿತು `ಕುಲಾಲ್ ವರ್ಲ್ಡ್ ಡಾಟ್ ಕಾಮ್’ ವರದಿ ಪ್ರಕಟಿಸಿತ್ತು.