ಪುತ್ತೂರು(ಕುಲಾಲ ವರ್ಲ್ಡ್ ಡಾಟ್ ಕಾಮ್) : ವಿದ್ಯುತ್ ಸ್ಪರ್ಶಿಸಿ ಯುವಕನೋರ್ವ ಮೃತಪಟ್ಟ ಘಟನೆ ಮೇ ೨೨ರಂದು ರಾತ್ರಿ ಕಾವು ಮಾಡ್ನೂರು ಗ್ರಾಮದ ಕಾವು ಮದ್ಲ ಪಟ್ಟುಮೂಲೆ ಎಂಬಲ್ಲಿ ನಡೆದಿದೆ.
ಪಟ್ಟುಮೂಲೆ ನಿವಾಸಿ, ಕತ್ತರಿಸಾಣೆ ಕಾಯಕದ ಹರಿಯಪ್ಪ ಮೂಲ್ಯ ಅವರ ಪುತ್ರ ಸುರೇಶ್ ಮೂಲ್ಯ(22ವ.) ಮೃತಪಟ್ಟವರು. ಸುರೇಶ್ ಅವರಿಗೆ ಮನೆಯಲ್ಲಿನ ರೆಫ್ರಿಜರೇಟರ್ ಬಳಿ ವಿದ್ಯುತ್ ಶಾಕ್ ತಗುಲಿದೆ. ವಿದ್ಯುತ್ ಶಾಕ್ನಿಂದ ಅಸ್ವಸ್ಥಗೊಂಡ ಅವರನ್ನು ಮನೆಯವರು ಪುತ್ತೂರು ಆಸ್ಪತ್ರೆಗೆ ಕರೆ ತರುವ ವೇಳೆ ದಾರಿ ಮಧ್ಯೆ ಮೃತಪಟ್ಟಿದ್ದಾರೆಂದು ತಿಳಿದು ಬಂದಿದೆ. ಮೃತ ದೇಹವನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ವೆಲ್ಡಿಂಗ್ ಕೆಲಸ ಮಾಡಿಕೊಂಡಿದ್ದ ಸುರೇಶ ಅವರು ತಂದೆ ಹರಿಯಪ್ಪ ಮೂಲ್ಯ, ತಾಯಿ, ಸಹೋದರರಾದ ಲೋಕೇಶ್ ಮತ್ತು ಜಗದೀಶ್ ಅವರನ್ನು ಅಗಲಿದ್ದಾರೆ.