ಬೆಳ್ತಂಗಡಿ(ಕುಲಾಲ್ ವರ್ಲ್ಡ್ ಡಾಟ್ ಕಾಮ್) : ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಲಾಕ್ಡೌನ್ ಘೋಷಣೆಯಿಂದ ಸಂಚಾರ ವ್ಯವಸ್ಥೆ ಇಲ್ಲದೇ ಅಗತ್ಯ ಔಷಧಗಳನ್ನು ತರಲು ತಾಲೂಕು ಕೇಂದ್ರಕ್ಕೆ ಅಥವಾ ಮಂಗಳೂರಿಗೆ ತೆರಳಲು ಆಗುತ್ತಿಲ್ಲ ಎಂದು ಚಿಂತಿಸಬೇಕಾಗಿಲ್ಲ. ಅದಕ್ಕಾಗಿಯೇ ಅಂತಹ ತುರ್ತು ಔಷಧಗಳ ಅಗತ್ಯವಿರುವವರಿಗೆ ಸಹಾಯಹಸ್ತ ಚಾಚಲು ವೀರಕೇಸರಿ ಅಂಬ್ಯುಲೆನ್ಸ್ ನ ಪದ್ಮನಾಭ ಕುಲಾಲ್ ಬಳಂಜ ಸಿದ್ಧರಿದ್ದಾರೆ.
ಪ್ರತಿ ವಾರಕ್ಕೊಮ್ಮೆಯಾದರೂ ಮಂಗಳೂರು ನಗರಕ್ಕೆ ಸಂಚರಿಸುವ ಪದ್ಮನಾಭ ಕುಲಾಲ್ ಈ ಲಾಕ್ಡೌನ್ ಸಂದರ್ಭದಲ್ಲಿ ಬೆಳ್ತಂಗಡಿ ತಾಲೂಕಿನ ಜನರಿಗೆ ತುರ್ತು ಅವಶ್ಯವಿರುವ ಔಷಧಗಳನ್ನು ತಲುಪಿಸಲು ನೆರವಾಗುತ್ತಿದ್ದಾರೆ. ಅವಶ್ಯವಿರುವ ಮಾತ್ರೆಗಳು, ಮುಲಾಮು, ಸಿರಪ್ಗಳ ತರಲು ವೈದ್ಯರು ನೀಡಿದ ಔಷಧ ಚೀಟಿ ಅಥವಾ ಮಾತ್ರೆಯ ಕವರ್ ಹಾಗೂ ಅದರೊಂದಿಗೆ ಔಷಧಕ್ಕೆ ತಗಲುವ ವೆಚ್ಚವನ್ನು ನೀಡಿದರೆ ತಾಲೂಕಿನ 81 ಗ್ರಾಮದ ಜನರಿಗೂ ತಲುಪಿಸಲು ಪದ್ಮನಾಭ ಕುಲಾಲ್ ಉತ್ಸುಕರಾಗಿದ್ದಾರೆ.