ಮಂಜೇಶ್ವರ(ಕುಲಾಲ ವರ್ಲ್ಡ್ ಡಾಟ್ ಕಾಮ್): ಕಾಸರಗೋಡು ಜಿಲ್ಲಾ ಕುಲಾಲ ಸಂಘದ ಅಧೀನದಲ್ಲಿರುವ ಪೈವಳಿಕೆ ಶಾಖೆ ವತಿಯಿಂದ ರಕ್ತ ಕ್ಯಾನ್ಸರ್ ನಿಂದ ಬಳಲುತ್ತಿರುವ ಬಾಲಕ ಹಾಗೂ ಆರ್ಥಿಕ ಅಡಚಣೆಯಿಂದ ಕಷ್ಟದಲ್ಲಿದ್ದ ಬಡ ಕುಟುಂಬದ ಯುವತಿಯ ಮದುವೆಗೆ ನೆರವು ನೀಡಲಾಯಿತು.
ಮಂಜೇಶ್ವರ ಪೈವಳಿಕೆ ಕನಿಯಾಲ ಹರೀಶ್ ಕುಲಾಲ್ ಮತ್ತು ರಂಜಿತಾ ದಂಪತಿಗಳ 4ರ ಹರೆಯದ ಪುತ್ರ ಹಾರ್ದಿಕ್ ಗೆ ಬಾಧಿಸಿದ ಮಾರಕ ರಕ್ತ ಕ್ಯಾನ್ಸರ್ ನ ಚಿಕಿತ್ಸೆಗೆ 10,000/ ರೂಪಾಯಿ ನೀಡಿ ಸಹಾಯ ಮಾಡಲಾಯಿತು. ಈ ಸಂದರ್ಭ ಸಂಘದ ಕಾರ್ಯದರ್ಶಿ ಸುಬ್ರಾಯ ಸಾಯ , ಸಂಚಾಲಕರಾದ ನಾಗೇಶ್ ಕೊಡಂದೂರ್ ಪದಾಧಿಕಾರಿಗಳಾದ ನಾರಾಯಣ ಗೊಳಿಮೂಲೆ, ಜಯಂತ ಚಿಪ್ಪಾರು, ವಿಶ್ವನಾಥ ಮಾಣಿಪ್ಪಾಡಿ ಇದ್ದರು. ಅಲ್ಲದೆ ತೀರಾ ಹಿಂದಳಿದಿರುವ ಕುಟುಂಬಕ್ಕೆ ಸೇರಿದ ಕುರುಡಪದವಿನ ಪ್ರೇಮಲತಾ ಅವರಿಗೆ ಹೇರೂರಿನ ಜಯಂತ ಎಂಬವರೊಂದಿಗೆ ಸಂಘದ ಸದಸ್ಯರ ಖರ್ಚು ವೆಚ್ಚದಲ್ಲಿ ಪೈವಳಿಕೆಯ ಸಮಾಜ ಮಂದಿರದಲ್ಲಿ ಉಚಿತ ವಿವಾಹ ನಡೆಸಿಕೊಡಲಾಯಿತು.