ಮಂಗಳೂರು(ಕುಲಾಲ ವರ್ಲ್ಡ್ ಡಾಟ್ ಕಾಮ್): ಪುಟ್ಟಣ್ಣ ಕುಲಾಲ್ ಪ್ರತಿಷ್ಠಾನ ಮಂಗಳೂರು ಇದರ 20ನೇ ವರ್ಷಾಚರಣೆಯ ಅಂಗವಾಗಿ ವಿಂಶತಿ ಸಂಭ್ರಮವು ವಿವಿಧ ಕಾರ್ಯಕ್ರಮಗಳೊಂದಿಗೆ ವೈವಿಧ್ಯಪೂರ್ಣವಾಗಿ ಜನವರಿ 19ರಂದು ನೆರವೇರಲಿದೆ.
ಖ್ಯಾತ ಕುಟುಂಬ ವೈದ್ಯ ಹಾಗು ಆರೋಗ್ಯ ಸೇವಾ ಮಾಹಿತಿ ತಜ್ಞರಾದ ಡಾ ಎಂ ಅಣ್ಣಯ್ಯ ಕುಲಾಲ್ ಉಳ್ತೂರು ಇವರು ತಮ್ಮ ದಿವಂಗತ ತಂದೆಯವರ ನೆನಪಿಗಾಗಿ ಹುಟ್ಟು ಹಾಕಿದ ಪ್ರತಿಷ್ಠಾನ ಇದಾಗಿದ್ದು, ಇದರ 20ನೇ ವರ್ಷಾಚರಣೆಯ ಅಂಗವಾಗಿ ಡಾ. ಅಣ್ಣಯ್ಯ ಅವರ ನೇತೃತ್ವದಲ್ಲಿ ಜನವರಿ 19ರಂದು ಪಡೀಲ್ ಕೊಡಕ್ಕಲ್ ನಲ್ಲಿರುವ ಕುಲಾಲ್ ಹೆಲ್ತ್ ಸೆಂಟರ್ ನಲ್ಲಿ ಅರೋಗ್ಯ ಜನಜಾಗೃತಿ ಸಮ್ಮೇಳನ ಹಾಗೂ ಅರಸು ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಪೊಲೀಸ್ ಆಯುಕ್ತ ಹರ್ಷ ಪಿ ಸಹಿತ ನಾಡಿನ ಅನೇಕ ಗಣ್ಯರು ಈ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.