ಮಂಗಳೂರು(ಕುಲಾಲ ವರ್ಲ್ಡ್ ಡಾಟ್ ಕಾಮ್): ಈ ಬಾರಿಯ ಮಂಗಳೂರು ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಕುಲಾಲ ಸಮಾಜದ ಮೂವರು ಅಭ್ಯರ್ಥಿಗಳು ಜಯ ಗಳಿಸಿದ್ದಾರೆ.
26ನೇ ದೇರೆಬೈಲು ನೈರುತ್ಯ ವಾರ್ಡ್ ಗೆ ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಗಣೇಶ್ ಕುಲಾಲ್ ಉರ್ವ ಅವರು ಜಯಭೇರಿ ಬಾರಿಸಿದ್ದಾರೆ. ಇವರು ಕಾಂಗ್ರೆಸ್ ನ ಅಭ್ಯರ್ಥಿ ಬಿ.ಪದ್ಮನಾಭ ಅಮೀನ್ ವಿರುದ್ಧ 1777 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
ಕಾಟಿಪಳ್ಳ (ಪೂರ್ವ)ಮೂರನೇ ವಾರ್ಡ್ ನಲ್ಲಿ ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಲೋಕೇಶ್ ಕುಲಾಲ್ ಬೊಳ್ಳಾಜೆ ಅವರು ವಿಜಯ ಪತಾಕೆ ಹಾರಿಸಿದ್ದಾರೆ. ಈ ವಾರ್ಡ್ ನಲ್ಲಿ ಚತುಷ್ಕೋನ ಸ್ಪರ್ಧೆ ಏರ್ಪಟ್ಟಿದ್ದರೂ ಬಿಜೆಪಿಯ ಲೋಕೇಶ್ ಬೊಳ್ಳಾಜೆ ಎಲ್ಲರನ್ನು ಹಿಂದಿಕ್ಕಿ ಭರ್ಜರಿ ಮತ ಪಡೆದು ಜಯಗಳಿಸುವುದರಲ್ಲಿ ಸಫಲರಾಗಿದ್ದಾರೆ. ಇವರು ಕಾಂಗ್ರೆಸ್ ನ ಅಭ್ಯರ್ಥಿ ಬಶೀರ್ ಅಹಮದ್ ವಿರುದ್ಧ 806 ಮತಗಳ ಅಂತರದಿಂದ ವಿಜಯ ಸಾಧಿಸಿದ್ದಾರೆ.
ಕದ್ರಿ ಕಂಬ್ಳ ಕ್ಷೇತ್ರದಲ್ಲಿ ಬಿಜೆಪಿಯ ಲೀಲಾವತಿ ಪ್ರಕಾಶ್ ಕುಲಾಲ್ ಜಯ ಸಾಧಿಸಿದ್ದಾರೆ. ಇವರು ಒಟ್ಟು 1884 ಮತ ಗಳಿಸಿದ್ದಾರೆ. ಇವರ ಪ್ರತಿಸ್ಪರ್ಧಿ ಕಾಂಗ್ರೆಸ್ ನ ರೇಖಾ ಸುರೇಖಾ ಅವರು 318 ಮತ ಪಡದಿದ್ದಾರೆ.